ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಂವಿಧಾನ (Constitution) ಬದಲಾವಣೆ ಮಾಡುತ್ತೇವೆ ಎಂದು ಮಾತಾಡಿಲ್ಲ. ತಿದ್ದುಪಡಿ ಬಗ್ಗೆ ಅವರು ಮಾತಾಡಿರೋದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪರ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮರ್ಥನೆ ಮಾಡಿಕೊಂಡಿದ್ದಾರೆ.
ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೊಟ್ಟಿಲ್ಲ. ಡಿಕೆಶಿ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂಬ ಬಿಜೆಪಿ ನಾಯಕರ ಆಗ್ರಹಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅನಂತ್ ಕುಮಾರ್ ಹೆಗಡೆ ಮಾತಾಡಿದಾಗ ಬೀದಿಗಳಿದು ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ರು. ಹೇಳಿದ ಕೂಡಲೇ ಯಾಕೆ ಹೆಗಡೆ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಡಿಕೆಶಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ತಿದ್ದುಪಡಿ ಬಗ್ಗೆ ನ್ಯಾಯಾಲಯದ ಉಲ್ಲೇಖ ಮಾಡಿ ಮಾತಾಡಿದ್ದಾರೆ ಅಷ್ಟೇ ಎಂದು ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು
ಬಿಜೆಪಿ ಅವರಿಂದ ನಾವು ಸಂವಿಧಾನದ ಬಗ್ಗೆ ಕಲಿಯೋ ಅವಶ್ಯಕತೆ ಇಲ್ಲ. ಸಂವಿಧಾನ ರಕ್ಷಣೆ ನಮ್ಮ ಪಕ್ಷದ ನಿಲುವು. 371 ಜೆ ತಿದ್ದುಪಡಿ ಅಲ್ಲವಾ? ನಾವು ಅದನ್ನ ಮಾಡಿದ್ದು. ಕಾಲಕಾಲಕ್ಕೆ ತಿದ್ದುಪಡಿ ಮಾಡಿಕೊಳ್ಳಬಹುದು ಅಂತ ಅಂಬೇಡ್ಕರ್ ಅವರೇ ಹೇಳಿದ್ದಾರೆ .ಮನುಸ್ಮೃತಿ ನಮ್ಮ ಸಂವಿಧಾನ ಆಗಬೇಕು ಅಂತ ಹೇಳಿದವರು ಬಿಜೆಪಿ ಅವರು. ಅಬ್ ಕೀ ಬಾರ್ ಮೋದಿ ಸರ್ಕಾರ. 400 ಸ್ಥಾನ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರು ಬಿಜೆಪಿಯವರು. ಅಮಿತ್ ಶಾ ಸದನದಲ್ಲಿ ಅಂಬೇಡ್ಕರ್ ಬಗ್ಗೆ ಜಪ ಮಾಡಬೇಡಿ ಅಂದರು. ಅದರ ಬಗ್ಗೆ ಯಾರು ಮಾತಾಡಲ್ಲ. ಬಿಜೆಪಿ ಅವರು 400 ಸ್ಥಾನ ಬಂದಿದ್ದರೇ ಸಂವಿಧಾನ ಬದಲಾವಣೆ ಮಾಡಿರೋರು. ಅದಕ್ಕೆ ಜನರು ಅವಕಾಶ ಕೊಡಲಿಲ್ಲ. 400 ಸ್ಥಾನ ಕೊಡಲಿಲ್ಲ ಅಂತ ಡಿಕೆಶಿ ಹೇಳಿಕೆ ಪರೋಕ್ಷವಾಗಿ ಸಮರ್ಥಿಸಿಕೊಂಡರು. ಇದನ್ನೂ ಓದಿ: ನ್ಯಾ.ವರ್ಮಾ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಪೊಲೀಸರಿಂದ 8 ಮೊಬೈಲ್ ಸೀಜ್!