ಬಾಲಿವುಡ್‌ನಲ್ಲಿ ಹೀರೋಗಳ, ಕ್ರಿಕೆಟ್ ರಂಗದಲ್ಲಿ ಸಾಧನೆ ಮಾಡಿದವರ ಬಯೋಪಿಕ್‌ಗಳು (Biopic) ಸಿನಿಮಾ ರೂಪದಲ್ಲಿ ಬಂದು ಸಕ್ಸಸ್ ಕಂಡಿವೆ. ಈಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರ ಬದುಕು ಅನ್ನು ಸಿನಿಮಾ ರೂಪದಲ್ಲಿ ಬರಲು ಸಜ್ಜಾಗಿದೆ. ಚಿತ್ರದ ಮೊದಲ ಪೋಸ್ಟರ್ ಕೂಡ ಅನಾವರಣ ಮಾಡಲಾಗಿದೆ. ಇದನ್ನೂ ಓದಿ:ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ
‘ಅಜೇ: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’ (Ajey: The Untold Story of a Yogi) ಎಂಬ ಟೈಟಲ್ ಅನ್ನು ಸಿನಿಮಾಗೆ ಇಡಲಾಗಿದೆ. ಈ ಚಿತ್ರವು ಶಾಂತನು ಗುಪ್ತ ಅವರ ‘ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್’ ಎಂಬ ಪುಸ್ತಕವನ್ನು ಆಧರಿಸಿದೆ. ರಿಲೀಸ್ ಆದ ಪೋಸ್ಟರ್‌ನಲ್ಲಿ ನಟ ಅನಂತ್ ಜೋಶಿ ಅವರು ಯೋಗಿ ಆದಿತ್ಯನಾಥ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ವರ್ಷವೇ ಸಿನಿಮಾ ರಿಲೀಸ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿದೆ.
View this post on Instagram
ಇದು ಹಳ್ಳಿಯ ಮಧ್ಯಮ ವರ್ಗದ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗುವ ಕಥೆಯನ್ನು ತೋರಿಸಲಾಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ ಅನಂತ್ ಜೋಶಿ ಜೊತೆ ಪರೇಶ್ ರಾವಲ್, ದಿನೇಶ್ ಲಾಲ್ ಯಾದವ್, ಪವನ್ ಮಲ್ಹೋತ್ರಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾ ನೋಡಲು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.