ನವದೆಹಲಿ/ಢಾಕಾ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ (Muhammad Yunus) ಅವರಿಗೆ ವಿಶೇಷ ಪತ್ರವೊಂದು ಬಂದಿದೆ.
ಬಾಂಗ್ಲಾದೇಶ ರಾಷ್ಟ್ರೀಯ ದಿನಾಚರಣೆಯ (ವಿಮೋಚನಾ ದಿನ – 1971 Liberation War) ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರಿಗೆ ಪತ್ರ ಬರೆದು ಶುಭ ಹಾರೈಸಿದ್ದಾರೆ. ಉಭಯ ದೇಶಗಳ ಹಿತಾಸಕ್ತಿ ಮತ್ತು ಕಳಕಳಿಯ ದೃಷ್ಟಿಯಿಂದ ಪರಸ್ಪರ ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸುವ ಮಹತ್ವವನ್ನು ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?
ಥಾಯ್ಲೆಂಡ್ ನಲ್ಲಿ ನಡೆಯಲಿರುವ ಬಿಮ್‌ಸ್ಟೆಕ್ ಶೃಂಗ ಸಭೆಯಲ್ಲಿ ಪ್ರಥಮ ಬಾರಿಗೆ ಪರಸ್ಪರ ಭೇಟಿ ಮಾಡಲಿರುವ ಒಂದು ವಾರದ ಮೊದಲು ಈ ಬೆಳವಣಿಗೆ ನಡೆದಿದೆ. ಕಳೆದ ವರ್ಷ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಭಾರತದೊಂದಿಗೆ ಸ್ನೇಹಪರವಾಗಿದ್ದ ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಿಗೊಳಿಸಿ, ಯೂನುಸ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಏಕನಾಥ್ ಶಿಂಧೆ ʻದೇಶದ್ರೋಹಿʼ ಎಂದಿದ್ದ ಕಾಮೆಡಿಯನ್ ಕುನಾಲ್ ಕಮ್ರಾಗೆ 2ನೇ ಸಮನ್ಸ್
ಈ ಪತ್ರದಲ್ಲಿ ಮೋದಿ ಅವರು, 1971ರ ಬಾಂಗ್ಲಾದೇಶ (Bangladesh) ವಿಮೋಚನಾ ಯುದ್ಧದ ಇತಿಹಾಸವನ್ನು ಮೋದಿ ಅವರು ನೆನಪಿಸಿದ್ದಾರೆ. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ, ಭಾರತವು ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಜನರಿಗೆ ಮಿಲಿಟರಿ, ರಾಜತಾಂತ್ರಿಕ ಮತ್ತು ಮಾನವೀಯ ನೆರವು ನೀಡಿತು ಎಂಬುದು ಗಮನಾರ್ಹವಾಗಿದೆ. ಭಾರತೀಯ ಸೇನೆಯು ಪಾಕಿಸ್ತಾನ ಸೇನೆಯ ವಿರುದ್ಧ ಯುದ್ಧ ನಡೆಸಿತು, ಇದರ ಪರಿಣಾಮವಾಗಿ 16 ಡಿಸೆಂಬರ್ 1971 ರಂದು ಢಾಕಾದಲ್ಲಿ ಪಾಕಿಸ್ತಾನವು ಸೋತಿತು ಮತ್ತು ಬಾಂಗ್ಲಾದೇಶವು ಸ್ವತಂತ್ರ ರಾಷ್ಟ್ರವಾಯಿತು.
ರಾಷ್ಟ್ರೀಯ ದಿನಾಚರಣೆಯು ಉಭಯ ದೇಶಗಳ ದ್ವಿಪಕ್ಷೀಯ ಪಾಲುದಾರಿಕೆಗೆ ಅಡಿಪಾಯ ಎನಿಸಿದ ಪರಸ್ಪರ ಹಂಚಿಕೊಂಡಿರುವ ಇತಿಹಾಸ ಮತ್ತು ತ್ಯಾಗದ ಪ್ರತೀಕ. ಬಾಂಗ್ಲಾದೇಶ ವಿಮೋಚನಾ ಯುದ್ಧದ ಸ್ಫೂರ್ತಿ, ಹಲವು ಕ್ಷೇತ್ರಗಳಲ್ಲಿಸಮೃದ್ಧವಾಗಿ ಬೆಳೆದಿರುವ ಮತ್ತು ನಮ್ಮ ಜನತೆಗೆ ಲಾಭ ತರುವ ನಮ್ಮ ಸಂಬಂಧಕ್ಕೆ ಮಾರ್ಗದರ್ಶಿ ದೀಪವಾಗಿ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ.
ಪರಸ್ಪರ ದೇಶಗಳ ಹಿತಾಸಕ್ತಿ ಮತ್ತು ಕಳಕಳಿಗೆ ಪರಸ್ಪರ ಸಂವೇದನಾಶೀಲತೆ ಆಧಾರದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಇರುವ ಸಮಾನ ಆಕಾಂಕ್ಷೆಯನ್ನು ಆಧರಿಸಿದ ಈ ಪಾಲುದಾರಿಕೆಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!
ಇದೀಗ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ನಿರ್ಗಮಿಸಿದ ನಂತರ, ಬಾಂಗ್ಲಾದೇಶದ ಹೊಸ ಆಡಳಿತವು ಭಾರತದೊಂದಿಗೆ ಘರ್ಷಣೆಯ ನಿಲುವನ್ನು ಅಳವಡಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಹಲವು ವಿಷಯಗಳಿಗೆ ಭಾರತದ ಮೇಲೆ ಅವಲಂಬಿತವಾಗಿದ್ದ ಬಾಂಗ್ಲಾದೇಶ ಈಗ ಮಂಡಿಯೂರಿದೆ. ಈ ನಡುವೆ ಯೂನುಸ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಉಭಯ ಮುಖಂಡರು ಏಪ್ರಿಲ್ 3-4ರಂದು ಬ್ಯಾಂಕಾಕ್‌ನಲ್ಲಿ ನಡೆಯುವ ಬಿಮ್‌ಸ್ಟೆಕ್ ಶೃಂಗದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶ ದ್ವಿಪಕ್ಷೀಯ ಸಭೆಗೆ ಕೋರಿದ್ದು, ಭಾರತ ಈ ವಿಷಯದಲ್ಲಿ ಮೌನವಾಗಿದೆ. ಇದನ್ನೂ ಓದಿ: Uttar Pradesh | ಪತ್ನಿಯ ಅಕ್ರಮ ಸಂಬಂಧ ತಿಳಿದು ಪ್ರಿಯಕರನೊಂದಿಗೇ ಮದ್ವೆ ಮಾಡಿಸಿದ ಪತಿ