ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್‌

Public TV
1 Min Read
donald trump

ವಾಷಿಂಗ್ಟನ್‌: ದಿನಕ್ಕೊಂದು ನಿರ್ಣಯದ ಮೂಲಕ ಸಂಚಲನ ಮೂಡಿಸುತ್ತಿರುವ ಅಮೆರಿಕ (USA) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ಇನ್ನು ಮುಂದೆ ಮತ ಚಲಾವಣೆ ಮಾಡುವವರು ಪೌರತ್ವದ ಸಾಕ್ಷ್ಯವನ್ನು ತೋರಿಸುವುದನ್ನು ಕಡ್ಡಾಯ ಮಾಡಿದ್ದಾರೆ.

ಸ್ವಯಂ ಆಡಳಿತಕ್ಕೆ ನಾವು ಅನೇಕರಿಗೆ ದಾರಿದೀಪವಾಗಿದ್ದರೂ ಚುನಾವಣೆಯಲ್ಲಿ ಅತ್ಯಗತ್ಯವಾಗಿ ಇರಬೇಕಿದ್ದ ಪ್ರಾಥಮಿಕ ನಿಯಮಗಳನ್ನು ಜಾರಿ ಮಾಡಲು ನಾವು ವಿಫಲವಾಗಿದ್ದೇವೆ. ಭಾರತ (India) ಬ್ರೆಜಿಲ್‌ನಂತಹ ದೇಶಗಳೂ ಮತಚೀಟಿಗೆ ಬಯೋಮೆಟ್ರಿಕ್ ಡೇಟಾಬೇಸ್ (Biometric Database) ಲಿಂಕ್‌ ಮಾಡುತ್ತಿವೆ ಎಂದಿದ್ದಾರೆ.  ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

ಚುನಾವಣಾ ವಿಚಾರದಲ್ಲಿ ಅಮೆರಿಕ ಹಿಂದೆ ಉಳಿದಿದೆ. ಅಮೆರಿಕ ಚುನಾವಣಾ (US Election) ಪ್ರಕ್ರಿಯೆಯಲ್ಲಿ ಮಾತ್ರ ಸಾಕಷ್ಟು ಲೋಪಗಳಿವೆ ಎಂದು ಟ್ರಂಪ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಅಮೆರಿಕಾ ಪೌರರಲ್ಲದವರಿಂದ ದೇಣಿಗೆ ಸ್ವೀಕರಿಸುವಂತಿಲ್ಲ ಎಂಬ ಹೊಸ ನಿಯಮವನ್ನು ಟ್ರಂಪ್‌ ತರುತ್ತಿದ್ದಾರೆ.

Share This Article