ನನ್ನ ಮೇಲೆ ಕಲ್ಲೆಸೆದಿಲ್ಲ: ಸೋನು ನಿಗಮ್ ಸ್ಪಷ್ಟನೆ

Public TV
1 Min Read
sonu nigam

ಕಾರ್ಯಕ್ರಮ ಅರ್ಧಕ್ಕೆ ನಿಲ್ಲಲು ಕಾರಣ ಬಿಚ್ಚಿಟ್ಟ ಗಾಯಕ 

ಗಾಯಕ ಸೋನು ನಿಗಮ್ (Sonu Nigam) ಇತ್ತೀಚೆಗೆ ಕಾನ್ಸರ್ಟ್‌ವೊಂದರಲ್ಲಿ ಹಾಡುವಾಗ ಕಲ್ಲೆಸೆದಿದ್ದಾರೆ ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಕಲ್ಲೆಸೆದಿಲ್ಲ ಎಂದು ಸೋನು ನಿಗಂ ಸ್ಪಷ್ಟಪಡಿಸಿದ್ದಾರೆ. ಘಟನೆಯ ಬಗ್ಗೆ ಸುದೀರ್ಘವಾಗಿ ಪೋಸ್ಟ್‌ವೊಂದನ್ನು ಗಾಯಕ ಹಂಚಿಕೊಂಡಿದ್ದಾರೆ.‌ ಇದನ್ನೂ ಓದಿ:ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’ ಬಿಡುಗಡೆಗೆ ರೆಡಿ!

sonu nigam

ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಮೇಲೆ ಕಲ್ಲೆಸೆದಿದಕ್ಕೆ ಶೋವನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಗಾಯಕ ರಿಯಾಕ್ಟ್ ಮಾಡಿ, ನನ್ನ ಮೇಲೆ ಕಲ್ಲುಗಳು ಮತ್ತು ಬಾಟಲಿಗಳನ್ನು ಎಸೆಯುವಂತಹ ಯಾವುದೇ ಘಟನೆ ನಡೆದಿಲ್ಲ. ವೇದಿಕೆಯ ಮೇಲೆ ಯಾರೋ ನನ್ನ ಸಹೋದ್ಯೋಗಿ ಸಭಾಂಕರ್‌ ಎದೆಗೆ ಎಲೆಕ್ಟ್ರಾನಿಕ್ ಸಿಗರೇಟ್ ಅನ್ನು ಎಸೆದಿದ್ದಾರೆ. ಹೀಗಾಗಿ ಈ ವಿಚಾರವನ್ನು ನನಗೆ ತಿಳಿಸಲಾಯಿತು. ಶೋ ನಿಲ್ಲಿಸೋದಾಗಿ ನನ್ನ ಸಹೋದ್ಯೋಗಿಗೆ ಮೊದಲೇ ತಿಳಿಸಿದ್ದೆ. ಆಗ ವೇದಿಕೆ ಮೇಲೆ ಎಸೆದಿದ್ದು ‘ಪೂಕಿ ಬ್ಯಾಂಡ್’ ಆಗಿತ್ತು ಎಂದು ಗಾಯಕ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನನ್ನ ಮೇಲೆ ಕಲ್ಲು ಎಸೆದಿಲ್ಲ ಎಂಬುದನ್ನು ಅವರು ಹೇಳಿದ್ದಾರೆ.

ಇತ್ತೀಚೆಗೆ ಸೋನು ನಿಗಮ್ ಪುಣೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದ ವೇಳೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ನೋವಿದ್ದರೂ ಕೂಡ ಶೋ ಮುಗಿಸಿ ಆ ನಂತರ ಆಸ್ಪತ್ರೆಗೆ ಅವರು ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

Share This Article