ಬೆಂಗಳೂರು: ಹನಿಟ್ರ‍್ಯಾಪ್ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಇದು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವ ವಿಚಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ (Mallikarjun Kharge) ಬೇಸರ ವ್ಯಕ್ತಪಡಿಸಿದರು.
ಹನಿಟ್ರ‍್ಯಾಪ್ ಯತ್ನದ ಕೆಸರೆರಚಾಟದ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಗೃಹ ಸಚಿವರಿಗೆ ರಾಜಣ್ಣ ಮನವಿ ಕೊಟ್ಟಿದ್ದಾರೆ. ಉನ್ನತ ಮಟ್ಟದ ತನಿಖೆ ಆಗಬೇಕು ಅಂದಿದ್ದಾರೆ. ಇದಕ್ಕೆ ಸರ್ಕಾರ ಕೂಡ ಸಿದ್ಧ ಇದೆ ಎಂದು ಹೇಳಿದರು. ಇದನ್ನೂ ಓದಿ: ಏ.2ಕ್ಕೆ ಸಿಎಂ ಡೆಲ್ಲಿಗೆ – ಹನಿಟ್ರ‍್ಯಾಪ್ ಬಗ್ಗೆ ಮಾಹಿತಿ ಕೊಡ್ತಾರಾ ಸಿದ್ದರಾಮಯ್ಯ?
ಹನಿಟ್ರ‍್ಯಾಪ್ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಪರಮೇಶ್ವರ್ ಅವರು ದೂರು ಕೊಡಲಿ ಎಂದು ಹೇಳಿದ್ದರು. ಗುರುವಾರದವರೆಗೂ ಸಮಯ ಕೇಳಿದ್ದರು. ನೋಡೋಣ ಎಂದಿದ್ದರು. ಇದು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವ ವಿಚಾರವಾಗಿದೆ. ಕೋಟಿ ಜನರಲ್ಲಿ 224 ಜನರಿಗೆ ರಾಜಕೀಯಕ್ಕೆ ಬರಲು ಅವಕಾಶ ಇದೆ. ಆದರೆ ನಮ್ಮ ಕ್ರೆಡಿಬಿಲಿಟಿಯನ್ನು ನಾವೇ ಕಳೆದುಕೊಳ್ಳುವುದು ದುರಂತದ ಸಂಗತಿ ಎಂದರು. ಇದನ್ನೂ ಓದಿ: ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ
ಅನೇಕರದ್ದು ಸಿಡಿ ಇದೆ ಎಂದು ಹೇಳಿದ್ದಾರೆ. ಅಂದರೆ ಸಿಎಂ, ಡಿಸಿಎಂ, ಸ್ಪೀಕರ್ ಅವರ ಸಿಡಿ ಇದೆ ಅಂತಾನಾ? ಇದು ನಿಜಕ್ಕೂ ತಲೆ ತಗ್ಗಿಸುವ ವಿಚಾರ. ನಾವು ಕುಟುಂಬಗಳಿಗೆ, ಸ್ನೇಹಿತರಿಗೆ ಹೇಗೆ ಮುಖ ತೋರಿಸುವುದು. ನಮಗೂ ನೈತಿಕತೆ ಇರಬೇಕಲ್ವಾ. ಮಾಡುವವರಿಗೆ ಮಾಡಿಸಿಕೊಂಡವರಿಗೂ ಇದೇ ಬೇಕು ಅಂದ್ರೆ ಏನು? ಯಾರು ಟ್ರಿಕ್ಸ್ ಮಾಡುತ್ತಿದ್ದಾರೆ ಎನ್ನುವುದು ನಮಗೇನು ಗೊತ್ತು. ಹೌದು, ಮುಜುಗರ ತಂದಿದೆ. ನಾವೇನಾದ್ರೂ ಉಳಿಸಿಕೊಂಡಿದ್ದೇವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’ ಬಿಡುಗಡೆಗೆ ರೆಡಿ!
ಹನಿಟ್ರ‍್ಯಾಪ್ ವಿಚಾರದಲ್ಲಿ ಸ್ವಯಂಪ್ರೇರಿತ ದೂರನ್ನ ಹೇಗೆ ತೆಗೆದುಕೊಳ್ಳಲು ಆಗುತ್ತದೆ. ಸದನದಲ್ಲಿ ಚರ್ಚೆ ಆಗಿರುವುದರಿಂದ ಅವರೇ ದೂರು ಕೊಡಬೇಕು. ಯಾರೆಲ್ಲಾ ಹನಿಟ್ರ‍್ಯಾಪ್ ಮಾಡುತ್ತಿದ್ದಾರೆ ಎಂದು ದೂರು ಕೊಡಲಿ. ಯುವಕ ಯುವತಿಯವರು ಯಾರೂ ರಾಜಕಾರಣಿ ಆಗಬೇಕು ಎಂದು ಹೇಳುತ್ತಿಲ್ಲ. ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಹೇಳುತ್ತಾರೆ ಎಂದರು. ಇದನ್ನೂ ಓದಿ: ಮೋದಿ ಹೆಸ್ರಲ್ಲಿ 32 ಲಕ್ಷ ಗಿಫ್ಟ್ ಕಿಟ್ ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? – ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಹಿಂದೆ ಇದೇ ಸದನದಲ್ಲಿ ಬಿಜೆಪಿಯವರು ಏಕಪತ್ನಿ ವ್ರತಸ್ಥರಲ್ಲ ಅಂದಿದ್ದರು. ಇವರು ಇರಬಹುದು ಆದರೆ ನಾವಲ್ಲ. ಜನ ಮತ ಹಾಕಿ ಇಲ್ಲಿಗೆ ಕಳುಹಿಸಿರುತ್ತಾರೆ. ಹೀಗೆ ಆದಾಗ ಮುಜುಗರ ಆಗೇ ಆಗುತ್ತದೆ. ಇತಿಹಾಸ ತೆಗೆದು ನೋಡಿ, ರಾಜಕಾರಣಿಯಿಂದ ಸಾಮಾಜ್ರ‍್ಯ ಬೆಳೆದದ್ದು ಇದೇ ಸಂಸ್ಕೃತಿಯಲ್ಲೇ. ಯಾರೋ ಬಂದು ನಮಗೆ ಏನೋ ಮಾಡುತ್ತಾರೆ ಅಂದರೆ ನಾವು ಅದಕ್ಕೆ ತಯಾರು ಇದ್ದೇವೆ ಅಂತಾನಾ? ಎಂದು ಕೇಳಿದರು. ಇದನ್ನೂ ಓದಿ: ಮಂಡ್ಯ ಜನರು ಛತ್ರಿ ಹೇಳಿಕೆ; ಡಿಕೆಶಿ ಜನರ ಕ್ಷಮೆ ಕೇಳಬೇಕು – ಅನ್ನದಾನಿ