ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ಕನ್ನಡದ ನಟ ವಸಿಷ್ಠ ಸಿಂಹ (Vasishta Simha) ನಟನೆಯ ‘ಒಡೆಲಾ 2’ (Odela 2) ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ‘ಒಡೆಲಾ 2’ ಚಿತ್ರವನ್ನು ಏಪ್ರಿಲ್‌ನಲ್ಲಿ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.
ಸದಾ ಬೋಲ್ಡ್ ಪಾತ್ರ ಹಾಗೂ ಐಟಂ ಡ್ಯಾನ್ಸ್‌ನಿಂದಲೇ ಸದ್ದು ಮಾಡುತ್ತಿದ್ದ ತಮನ್ನಾ ಅವರು ಇದೀಗ ಸಾದ್ವಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಡೆಲಾ 2’ನಲ್ಲಿ ಸಾದ್ವಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಇನ್ನೂ ಈ ಚಿತ್ರ ಏ.17ರಂದು ಬಿಡುಗಡೆಯಾಗಲಿದೆ. ಇದನ್ನೂ ಓದಿ:ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಯಾರೂ ಪ್ರಚೋದನೆ ಮಾಡಿಲ್ಲ: ಅಂತಿಮ ವರದಿ ಸಲ್ಲಿಸಲಾಗಿದೆ
ಕನ್ನಡದ ನಟ ವಸಿಷ್ಠ ಸಿಂಹ ಕೂಡ ‘ಒಡೆಲಾ 2’ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂದು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರವನ್ನು ಅಶೋಕ ತೇಜ ಅವರು ನಿರ್ದೇಶನ ಮಾಡಿದ್ದಾರೆ.
ಇನ್ನೂ ‘ಒಡೆಲಾ 2’ನಲ್ಲಿ ಯುವ, ನಾಗ ಮಹೇಶ್, ವಂಶಿ, ಸುರೇಂದರ್ ರೆಡ್ಡಿ, ಭೂಪಾಲ್, ಪೂಜಾ ರೆಡ್ಡಿ, ಹೆಬ್ಬಾ ಪಟೇಲ್ ನಟಿಸಿದ್ದಾರೆ. ಡಿ. ಮಧು ಮತ್ತು ಸಂಪತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಕಿರಿಕ್ ಪಾರ್ಟಿ’, ‘ಕಾಂತಾರ’ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಅಜನೀಶ್ ಲೋಕನಾಥ್ ಅವರು ‘ಒಡೆಲಾ 2’ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.