– ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ
– ಅಮೆರಿಕದ ಒಂದೇ ಪ್ರವಾಸಕ್ಕೆ 22 ಕೋಟಿ ರೂ. ವೆಚ್ಚ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು 2022ರ ಮೇ ತಿಂಗಳಿನಿಂದ 2024ರ ಡಿಸೆಂಬರ್‌ವರೆಗೆ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದು, ಈ ಪ್ರವಾಸಗಳಿಗೆ ಸುಮಾರು 258 ಕೋಟಿ ರೂ. ಖರ್ಚಾಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ. ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ (Pabitra Margherita) ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಈ ಉತ್ತರವನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರವು ಒದಗಿಸಿದ ದತ್ತಾಂಶದಲ್ಲಿ ಪ್ರಧಾನಮಂತ್ರಿ ಮೋದಿ ಅವರ ವಿದೇಶಿ ಪ್ರವಾಸಗಳ (Foreign visits) ಖರ್ಚು ವೆಚ್ಚವನ್ನು ದೇಶವಾರು ವಿಂಗಡಿಸಿದೆ. ಈ ಪ್ರವಾಸಗಳಲ್ಲಿ ಅಧಿಕೃತ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಇತರರ ಖರ್ಚು ಸೇರಿದೆ. ಇದನ್ನೂ ಓದಿ: ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್
ಈ 38 ಪ್ರವಾಸಗಳಲ್ಲಿ 2023ರ ಜೂನ್‌ನಲ್ಲಿ ಅಮೆರಿಕಕ್ಕೆ (America) ನೀಡಿದ ಭೇಟಿಯು ಅತ್ಯಂತ ದುಬಾರಿ ಪ್ರವಾಸವಾಗಿದೆ. ಈ ಪ್ರವಾಸಕ್ಕೆ ಒಟ್ಟು 22.89 ಕೋಟಿ ರೂ. ಖರ್ಚಾಗಿವೆ ಎಂದು ಸರ್ಕಾರ ತಿಳಿಸಿದೆ. 2024ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಮತ್ತೊಮ್ಮೆ ಭೇಟಿ ನೀಡಿದಾಗ 15.33 ಕೋಟಿ ರೂ. ಖರ್ಚಾಗಿತ್ತು ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಸಿಬಿಐ ಮೂಲಕವೇ ಹನಿಟ್ರ‍್ಯಾಪ್ ತನಿಖೆಯಾಗಲಿ – ಗೃಹ ಸಚಿವರಿಗೆ ಯತ್ನಾಳ್ ಪತ್ರ
ಪ್ರವಾಸಗಳ ಪಟ್ಟಿಯು 2022ರ ಮೇ ತಿಂಗಳ ಜರ್ಮನಿ ಭೇಟಿಯಿಂದ ಆರಂಭವಾಗಿ 2024ರ ಡಿಸೆಂಬರ್‌ನಲ್ಲಿ ಕುವೈತ್ ಭೇಟಿಯವರೆಗೆ ವಿಸ್ತರಿಸಿದೆ. ಇತರ ಪ್ರಮುಖ ಪ್ರವಾಸಗಳಲ್ಲಿ ಜಪಾನ್(17 ಕೋಟಿ ರೂ.), ಇಟಲಿ(14.36 ಕೋಟಿ ರೂ.), ಪೋಲೆಂಡ್(10.10 ಕೋಟಿ ರೂ.), ರಷ್ಯಾ(5.34 ಕೋಟಿ ರೂ.) ಮತ್ತು ನೇಪಾಳ(80 ಲಕ್ಷ ರೂ.) ವೆಚ್ಚವಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ ಆಗಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ: ಡಿಕೆಶಿ
ಪ್ರಧಾನಮಂತ್ರಿ ಮೋದಿ ಅವರ ಪ್ರವಾಸಗಳ ಖರ್ಚನ್ನು ಹೋಲಿಕೆ ಮಾಡುವ ಸಲುವಾಗಿ, ಸರ್ಕಾರವು 2014ರ ಮೊದಲಿನ ಕೆಲವು ಪ್ರವಾಸಗಳ ದತ್ತಾಂಶವನ್ನು ಸಹ ಒದಗಿಸಿದೆ. 2011ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ (Manmohan Singh) ಅಮೆರಿಕಕ್ಕೆ ಭೇಟಿ ನೀಡಿದಾಗ 10.74 ಕೋಟಿ ರೂ. ಖರ್ಚಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ, ವ್ಯಕ್ತಿ ವಶಕ್ಕೆ
2013ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದಾಗ 9.95 ಕೋಟಿ ರೂ., ಫ್ರಾನ್ಸ್‌ಗೆ 8.33 ಕೋಟಿ ರೂ. ಮತ್ತು ಜರ್ಮನಿಗೆ 6.02 ಕೋಟಿ ರೂ. ಖರ್ಚಾಗಿತ್ತು. ಈ ದತ್ತಾಂಶಗಳನ್ನು ಹಣದುಬ್ಬರ ಅಥವಾ ಕರೆನ್ಸಿ ಮೌಲ್ಯದ ಏರಿಳಿತಕ್ಕೆ ಹೊಂದಿಸದೇ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್
ಈ ಮಾಹಿತಿ ಸಂಸತ್ತಿನಲ್ಲಿ ಬಹಿರಂಗಗೊಂಡ ನಂತರ, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿವೆ. ಈ ಪ್ರವಾಸಗಳಿಂದ ಆಗಿರುವ ಪ್ರಯೋಜನಗಳಾದರೂ ಏನು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.