ಕಲಬುರಗಿ: ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ (Wadi Police Station) ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ.
ಪೊಲೀಸ್ ಠಾಣೆಯೊಳಗೆ ಜೂಜಾಟದಲ್ಲಿ ತೊಡಗಿದ್ದ ಎಎಸ್ಐ ಮಹಿಮೂದ್ ಮಿಯಾ, ಹೆಡ್ ಕಾನ್ಸ್ಟೇಬಲ್ಗಳಾದ ನಾಗರಾಜ್, ಸಾಯಿಬಣ್ಣಾ, ಇಮಾಮ್, ಕಾನ್ಸ್ಟೇಬಲ್ ನಾಗಭೂಷಣ್ ಅವರನ್ನ ಅಮಾನತುಗೊಳಿಸಿ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಡ್ರಮ್ನಲ್ಲಿ ಮುಚ್ಚಿಟ್ಟ ಪತ್ನಿ
ಜೊತೆಗೆ ವಾಡಿ ಠಾಣೆಯ ಪಿಎಸ್ಐ ತಿರುಮಲೇಶ್ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ಕಾರಣ ನೀಡುವಂತೆ ಎಸ್ಪಿ ಕೇಳಿದ್ದಾರೆ. ಇದನ್ನೂ ಓದಿ: ಪಾಕ್ ರೈಲು ಹೈಜಾಕ್, ಪುಲ್ವಾಮಾ ಮಾದರಿ ಅಟ್ಯಾಕ್ – ಏನಿದು ಬಲೂಚ್ ದಂಗೆ?