ದಾವಣಗೆರೆ | ಸಾಲಬಾಧೆ ತಾಳಲಾರದೇ ಸಿಆರ್‌ಪಿಎಫ್ ಯೋಧ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Public TV
1 Min Read
DVG Army Sucide

ದಾವಣಗೆರೆ/ಅಮರಾವತಿ: ಸಾಲಬಾಧೆ ಹಾಗೂ ಜೀವನದಲ್ಲಿ ಜಿಗುಪ್ಸೆಯಿಂದಾಗಿ ಸಿಆರ್‌ಪಿಎಫ್ ಯೋಧ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ (Vijayawad) ನಡೆದಿದೆ.

ಮೃತ ಯೋಧನನ್ನು ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ನಿವಾಸಿ ಉಮೇಶ್(34) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಆಟೋ ಪಲ್ಟಿಯಾಗಿ ರೈತ ಸಂಘದ ಮುಖಂಡ ಸಾವು

ಕಳೆದ ಒಂದು ತಿಂಗಳ ಹಿಂದೆ ಕೈದಾಳೆ ಗ್ರಾಮಕ್ಕೆ ಉಮೇಶ್ ಆಗಮಿಸಿದ್ದರು. ಮೂರು ದಿನದ ಹಿಂದೆಯಷ್ಟೇ ರಜೆ ಮುಗಿಸಿ ಛತ್ತೀಸ್‌ಗಢದ 217 ಬೆಟಾಲಿಯನ್ ಕೊಂಟಾದಲ್ಲಿ ಡ್ಯೂಟಿಗೆ ಸೇರಿಕೊಂಡಿದ್ದರು. ಮಾರನೇ ದಿನ ಸಿಆರ್‌ಪಿಎಫ್ ಯೋಧರು ಉಮೇಶ್‌ಗಾಗಿ ಎಷ್ಟೇ ಹುಡುಕಾಡಿದರೂ ಆತ ಸಿಕ್ಕಿರಲಿಲ್ಲ. ಬಳಿಕ ವಿಜಯವಾಡದಲ್ಲಿ ರೈಲಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.

ಈ ಬಗ್ಗೆ ಉಮೇಶ್ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಬೆಳಿಗ್ಗೆ ದಾವಣಗೆರೆ ತಾಲೂಕಿನ ಕೈದಾಳೆ ಸ್ವಗ್ರಾಮಕ್ಕೆ ಮೃತದೇಹವನ್ನು ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಮಣಿಪುರಕ್ಕೆ ಭೇಟಿ ನೀಡಲಿದೆ ಸುಪ್ರೀಂ ಕೋರ್ಟ್ ಐವರು ಜಡ್ಜ್‌ಗಳ ನಿಯೋಗ

Share This Article