ಬೆಂಗಳೂರು: ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ ಎಂಬ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕರು, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಡುವೆ ಜಟಾಪಟಿ ಮುಂದುವರಿದಿದೆ.
ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಾವರ್ಕರ್ ಅವರು ಅಂಬೇಡ್ಕರ್ ಅವರ ಸೋಲಿಗೆ ಸಂಚು ಮಾಡಿದ್ದರು. ಈ ಕುರಿತು ದಾಖಲೆ ಬಿಡುಗಡೆ ಮಾಡಿದರೆ ಬಿಜೆಪಿಯವರು ರಾಜೀನಾಮೆ ಕೊಡುತ್ತೀವಿ ಎಂದು ಹೇಳಿದ್ದರು. ಈಗ ದಾಖಲೆ ಬಿಡುಗಡೆ ಮಾಡಿದ್ದೇವೆ. ರಾಜೀನಾಮೆ ಕೊಡಲಿ. ಅಂಬೇಡ್ಕರ್ ಅವರು 1952ರಲ್ಲಿ ಅವರ ಸ್ನೇಹಿತರಿಗೆ ಪತ್ರ ಬರೆಯುತ್ತಾರೆ. ನಾನು ಸೋತಿರುವುದು ದಾಂಗೆ ಮತ್ತು ಸಾರ್ವಕರ್ ಅವರಿಂದ ಎಂದು ಪತ್ರದಲ್ಲಿ ಇದೆ. ಅಂಬೇಡ್ಕರ್ ಅವರೇ ಲಿಖಿತವಾಗಿ ಬರೆದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಕೊಡಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ
ಇನ್ನೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಮಾತನಾಡಿ, ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. ಆದರೆ ನಮ್ಮ ಕಡೆಗೆ ಸಾಕಷ್ಟು ದಾಖಲೆಗಳಿವೆ, ಅದನ್ನು ಬಿಡುಗಡೆ ಮಾಡ್ತೀವಿ. ಪ್ರಿಯಾಂಕ್ ಖರ್ಗೆ ಅವರು ಅಲ್ಪಸ್ವಲ್ಪ ಓದಿರುತ್ತಾರೆ. ಪೂರ್ತಿಯಾಗಿ ನಮ್ಮ ಕಡೆಯಿರುವ ದಾಖಲೆ ಕೊಡ್ತೀವಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ, ಹೇಗೆ ಕಡೆಗಣಿಸಿದ್ದರು ಎನ್ನುವುದನ್ನು ಬಹಿರಂಗ ಮಾಡ್ತೀವಿ. ಅವರನ್ನು ರಾಜಕೀಯವಾಗಿ ಬೆಳೆಯಲು ಬಿಡಲಿಲ್ಲ, ತುಳಿಯುವ ಕೆಲಸ ಮಾಡಿದರು. ಸತ್ಯ ಅಂದ್ರೆ ಕಾಂಗ್ರೆಸ್‌ಗೆ ಯಾವಾಗಲೂ ಕಹಿ. ಸತ್ಯ ಹೇಳಿದರೆ ಅವರಿಗೆ ಮೈ ಉರಿಯುತ್ತದೆ. ಅವರು ಸನಾತನ ಧರ್ಮದ ಬಗ್ಗೆಯೂ ಕೀಳಾಗಿ ಮಾತನಾಡುತ್ತಾರೆ. ನಾವೂ ಎಲ್ಲ ಸವಾಲು ಸ್ವೀಕರಿಸುತ್ತೇವೆ. ಬಾಯಿಗೆ ಬಂದಿದ್ದು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಒತ್ತುವರಿ ಆಗಿದ್ರೆ ತೆರವು ಮಾಡಿಕೊಳ್ಳಿ, ನಮ್ಮ ಜಮೀನು ಹುಡುಕಿಕೊಡಿ – ಭೂ ದಾಖಲೆಗಳ ಇಲಾಖೆಗೆ ಹೆಚ್‌ಡಿಕೆ ಪತ್ರ