‘ಪುಷ್ಪ’, ‘ಪುಷ್ಪ 2’ (Pushpa 2) ಸಿನಿಮಾಗಳ ಸಕ್ಸಸ್ ಬಳಿಕ ಬಾಲಿವುಡ್‌ನ ಸ್ಟಾರ್ ನಟನಿಗೆ ನಿರ್ದೇಶನ ಮಾಡಲು ಸುಕುಮಾರ್ (Sukumar) ಸಜ್ಜಾಗಿದ್ದಾರೆ. ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿರುವ ಶಾರುಖ್ ಖಾನ್‌ಗೆ (Sharukh Khan) ಸುಕುಮಾರ್ ಡೈರೆಕ್ಷನ್ ಮಾಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.
ಗ್ರಾಮೀಣ ಭಾಗದ ರಾಜಕೀಯ ಕುರಿತಾದ ಕಥೆಯನ್ನು ಶಾರುಖ್ ಮೂಲಕ ತೋರಿಸಲು ಸುಕುಮಾರ್ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿದೆ. ಕಿಂಗ್ ಖಾನ್ ಶಾರುಖ್ ಕೂಡ ಕಥೆ ಇಷ್ಟವಾಗಿ ನಿರ್ದೇಶಕನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಕಡೆಯಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಪುಸ್ತಕ ರೂಪದಲ್ಲಿ ಪುನೀತ್ ರಾಜ್‌ಕುಮಾರ್ ಜೀವನಗಾಥೆ- ‘ಅಪ್ಪು’ ಜೀವನ ಚರಿತ್ರೆ ಬರೆದ ಅಶ್ವಿನಿ
ಇನ್ನೂ ಮಗಳು ಸುಹಾನಾರನ್ನು ಅದ್ಧೂರಿಯಾಗಿ ಲಾಂಚ್ ಮಾಡಬೇಕೆಂದಿದ್ದಾರೆ. ಅದಕ್ಕಾಗಿ ‘ಕಿಂಗ್’ ಸಿನಿಮಾದಲ್ಲಿ ಮಗಳೊಂದಿಗೆ ಶಾರುಖ್ ಕೂಡ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಆ ನಂತರ ‘ಪಠಾಣ್ 2’ ಮತ್ತು ಸುಕುಮಾರ್ ಜೊತೆಗಿನ ಸಿನಿಮಾದತ್ತ ಗಮನ ಕೊಡಲಿದ್ದಾರೆ.
ಸುಕುಮಾರ್ ಅವರು ರಾಮ್ ಚರಣ್ ಜೊತೆಗಿನ ಸಿನಿಮಾ ಹಾಗೂ ‘ಪುಷ್ಪ ಪಾರ್ಟ್ 3’ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ನಂತರ ಶಾರುಖ್ ಜೊತೆ ಕೈಜೋಡಿಸಲಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಗೆದ್ದು ಬೀಗಿದ ಹಾಗೇ ಬಾಲಿವುಡ್‌ನಲ್ಲೂ ಸದ್ದು ಮಾಡ್ತಾರಾ? ಸುಕುಮಾರ್ ಎಂದು ಕಾದುನೋಡಬೇಕಿದೆ.