ಬೆಂಗಳೂರು: ಮಿಕ್ಕಿದ್ದಕ್ಕೆಲ್ಲಾ ದಾಖಲೆ ಇರುತ್ತೆ, ಇದಕ್ಕೆ ಇರಲ್ವಾ? ಸರ್ಕಾರದ ತಪ್ಪಿದ್ದರೆ ನಮಗೆ ಶಿಕ್ಷೆಯಾಗುತ್ತೆ. ನಿಮ್ಮ ತಪ್ಪಿದ್ದರೆ ನಿಮಗೆ ಶಿಕ್ಷೆ ಆಗುತ್ತೆ. ಕೋರ್ಟ್‌ನಲ್ಲಿ ತೀರ್ಮಾನ ಆಗಿದೆ ಎಂದು ಜಮೀನು ತೆರವು (Land Acquisition) ವಿಚಾರವಾಗಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಜಮೀನು ತೆರವು ವಿಚಾರವಾಗಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಒತ್ತುವರಿ ಮಾಡಿದವರನ್ನೇ ಕೇಂದ್ರ ಸಚಿವರನ್ನಾಗಿ ಮಾಡಿಕೊಂಡಿದ್ದಾರಲ್ಲ? ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು. ಬಿಜೆಪಿಯವರು ಏನು ಹೇಳುತ್ತಾರೆ ಎಂದು ಇವರಿಗೆ ಕೇಳಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾರ್ಕಳದ ಎರ್ಲಪಾಡಿ ಕ್ಷೇತ್ರಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ
ಇನ್ನು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮಾತನಾಡಿ, ಹೈಕೋರ್ಟ್ ಆದೇಶದ ಮೇರೆಗೆ ಸರ್ವೆ ಕಾರ್ಯ ಮಾಡಲಾಗಿದೆ. ಕುಮಾರಸ್ವಾಮಿ ಜಮೀನು ಒತ್ತುವರಿ ಮಾಡಿದ್ದಾರೆ, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸರ್ವೆ ರಿರ್ಪೋಟ್ ಬಂದ ಬಳಿಕ ಅವರೇ ತೆರವು ಮಾಡಬೇಕಿತ್ತು. ಈಗ ಸರ್ಕಾರಿ ಜಮೀನನ್ನು ಹಿಂದಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಕಾಪಾಡಿಕೊಳ್ಳಬೇಕು. ಅವರು ಸರ್ಕಾರಿ ಜಮೀನನ್ನ ವಶದಲ್ಲಿ ಇಟ್ಟುಕೊಳ್ಳಬಾರದಿತ್ತು. ಒತ್ತುವರಿಗಳನ್ನು ಸರ್ಕಾರ ತೆರವು ಮಾಡಲೇಬೇಕು. ದೊಡ್ಡವರು, ಶ್ರೀಮಂತರು, ಸಾರ್ವಜನಿಕ ಜೀವನದಲ್ಲಿ ಇರುವವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್