ಉಡುಪಿ: ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ, ಖ್ಯಾತ ಕಮೆಂಟೇಟರ್ ರವಿಶಾಸ್ತ್ರಿ ಭೇಟಿ ನೀಡಿದರು. ಮೂಲ ನಾಗದೇವರಿಗೆ ಸರ್ವಸೇವೆ ನೀಡಿದರು.
ಭಾರತ ತಂಡದ ಮಾಜಿ ಕ್ಯಾಪ್ಟನ್ ರವಿಶಾಸ್ತ್ರಿ ಅವರ ಪೂರ್ವಜರು ಕಾರ್ಕಳ ತಾಲೂಕಿನ ಎರ್ಲಪಾಡಿಯವರು. 14 ವರ್ಷಗಳ ಹಿಂದೆ ಪತ್ನಿ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿದ್ದ ರವಿಶಾಸ್ತ್ರಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದನ್ನೂ ಓದಿ: ನ್ಯಾಯಬೆಲೆ ಅಂಗಡಿಯಲ್ಲಿ ಟೋಕನ್ ಎಸೆದವನ ಮೇಲೆ ಕ್ರಮ: ಮುನಿಯಪ್ಪ
ಎರ್ಲಪಾಡಿ ಕ್ಷೇತ್ರ ದೇವರ ಆಶೀರ್ವಾದದಿಂದ ಈ ದಂಪತಿ ಮಗಳನ್ನು ಪಡೆದಿದ್ದರು. ಅಂದಿನಿಂದ ಇಂದಿನವರೆಗೆ ರವಿಶಾಸ್ತ್ರಿಪ್ರತಿವರ್ಷ ಒಂದೆರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಬ್ರೇಕಪ್ ಬೆನ್ನಲ್ಲೇ ಸಿನಿಮಾದಲ್ಲಿ ತಮನ್ನಾ ಆ್ಯಕ್ಟೀವ್- ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್