ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಬರಲಿದೆ. ‘ಅಪ್ಪು’ ಹೆಸರಿನಲ್ಲೇ ಪುಸ್ತಕ ಬಿಡುಗಡೆಯಾಗಲಿದೆ. ಪುಸ್ತಕದ ಮುಖಪುಟ ರಿಲೀಸ್ ಮಾಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಿಸಿದ್ದಾರೆ. ಇದನ್ನೂ ಓದಿ:ಪುತ್ರನ ನಾಮಕರಣ ಸಂಭ್ರಮದ ಫೋಟೋ ಹಂಚಿಕೊಂಡ ಅಂಬಿ ಸೊಸೆ
ಅಭಿಮಾನಿಗಳಿಗೆ ಕನೆಕ್ಟ್ ಆಗಿರೋ ಹೆಸರು ಅಪ್ಪು. ಹಾಗಾಗಿ ಪುನೀತ್ ಬಯೋಗ್ರಫಿಗೆ ‘ಅಪ್ಪು’ (Appu) ಎಂದೇ ಹೆಸರಿಡಲಾಗಿದೆ. ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಜೊತೆಯಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಇದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಸದ್ಯ ಬುಕ್‌ನ ಕವರ್ ಪೇಜ್ ಹೇಗಿದೆ ಎಂಬುದನ್ನು ಪುನೀತ್ ಜನ್ಮದಿನದಂದು (ಮಾ.17) ಅಶ್ವಿನಿ ರಿವೀಲ್ ಮಾಡಿದ್ದಾರೆ.
ಪ್ರಸ್ತುತಪಡಿಸುತ್ತಿದ್ದೇವೆ ‘ಅಪ್ಪು’ – ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ… ❤️✨
Presenting ‘Appu’ – a soulful biographical tribute to Appu…
ಹೆಚ್ಚಿನ ಮಾಹಿತಿ ಶೀಘ್ರದಲ್ಲಿ | More updates soon#Appu #Biography pic.twitter.com/jq9uzDtQJp
— Ashwini Puneeth Rajkumar (@Ashwini_PRK) March 17, 2025
ಪುಸ್ತಕದ ಮುಖಪುಟ ರಿವೀಲ್ ಮಾಡುವಾಗ ಅಶ್ವಿನಿ (Ashwini Puneeth Rajkumar) ಜೊತೆ ಅಪ್ಪು ಪುತ್ರಿಯರು ಕೂಡ ಪೋಸ್ ನೀಡಿದ್ದಾರೆ. ಸದ್ಯ ಅಪ್ಪು ಬಯೋಗ್ರಫಿ ಬರಲಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದರಲ್ಲೂ ಅಶ್ವಿನಿ ಅವರೇ ಬರೆದಿದ್ದಾರೆ ಎಂದು ತಿಳಿದು ಪುಸ್ತಕದ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಅಂದಹಾಗೆ, ಇನ್ನಷ್ಟೇ ‘ಅಪ್ಪು’ ಬಯೋಗ್ರಫಿ ರಿಲೀಸ್ ದಿನಾಂಕ ತಿಳಿಯಬೇಕಿದೆ.