ತೆಲುಗು ನಿರ್ದೇಶಕ ಪುರಿ ಜಗನ್ನಾಥ್ (Puri Jagannadh) ಇತ್ತೀಚೆಗೆ ನಿರ್ದೇಶಿಸಿದ ಸಿನಿಮಾಗಳು ಥಿಯೇಟರ್‌ನಲ್ಲಿ ಮಕಾಡೆ ಮಲಗಿವೆ. ಹೀಗಿದ್ದರೂ ಸ್ಟಾರ್ ನಟನಿಗೆ ನಿರ್ದೇಶನ ಮಾಡುವ ಅವಕಾಶವನ್ನು ಪುರಿ ಜಗನ್ನಾಥ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು
ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ. ಪುನೀತ್ ನಟನೆಯ ‘ಅಪ್ಪು’ ಸಿನಿಮಾಗೂ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಇಷ್ಟೇಲ್ಲಾ ಟ್ಯಾಲೆಂಟೆಡ್ ನಿರ್ದೇಶಕನಾಗಿದ್ದರೂ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ಲೈಗರ್, ಡಬಲ್ ಇಸ್ಮಾರ್ಟ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತಿದೆ. ಹೀಗಿದ್ದರೂ ಅವರೊಂದಿಗೆ ಕೆಲಸ ಮಾಡಲು ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi) ಮುಂದಾಗಿದ್ದಾರೆ.
ಸ್ಟಾರ್ ನಟರು ಪುರಿ ಜಗನ್ನಾಥ್ ಜೊತೆ ಕೆಲಸ ಮಾಡಲು ಹಿಂದೇಟು ಹಾಕ್ತಿದ್ದಾರೆ. ಹೀಗಿರುವಾಗ ವಿಜಯ್ ಸೇತುಪತಿ ಅವರು ಪುರಿ ಜಗನ್ನಾಥ್ ಬರೆದ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಜಯ್ ಮ್ಯಾನರಿಸಂ, ಆ್ಯಟಿಟ್ಯೂಡ್‌ಗೆ ತಕ್ಕಂತೆ ಸಿನಿಮಾ ಕಥೆ ಸಿದ್ಧವಾಗಿದ್ದು, ಈ ಬಾರಿ ಗೆಲ್ಲುವ ಭರವಸೆಯಲ್ಲಿದ್ದಾರೆ ನಿರ್ದೇಶಕ.
ಸಾಲು ಸಾಲು ಸಿನಿಮಾ ಸೋಲಿನಿಂದ ಬಳಲಿರುವ ಪುರಿ ಜಗನ್ನಾಥ್ ಕೆರಿಯರ್‌ಗೆ ವಿಜಯ್ ಸಿನಿಮಾ ಸಕ್ಸಸ್ ಕೊಡುತ್ತಾ? ಎಂದು ಕಾಯಬೇಕಿದೆ.