ಚಿಕ್ಕೋಡಿ: ಕಲುಷಿತ ನೀರಿನಿಂದ ಜಿಲ್ಲೆಯ ಅಥಣಿ (Athani) ತಾಲೂಕಿನ ಶಿರಹಟ್ಟಿ ಗ್ರಾಮದ ಹೊರವಲಯದ ಕೃಷ್ಣ ನದಿಯಲ್ಲಿರುವ (Krishna River) ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪಿವೆ.
ನದಿ ತೀರದಲ್ಲಿ ರಾಶಿಗಟ್ಟಲೇ ಮೀನು ಸತ್ತು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ. ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ನೀರಿನ ಪರಿಣಾಮದಿಂದ ಜಲಚರಗಳು ಸಾವನ್ನಪ್ಪಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬರಿಗೈಯಲ್ಲಿ ಬೆಂಕಿ ಕೆಂಡ ತೂರಿ ಜಾತ್ರೆ
ನದಿ ಪಾತ್ರಗಳಲ್ಲಿ ಕೊಳೆತ ಸ್ಥಿತಿಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದ ಪರಿಣಾಮ ನದಿ ನೀರು ಹಾಗೂ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ. ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೃಷ್ಣ ನದಿ ಜಲ ಶುದ್ಧೀಕರಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದರು. ಇದನ್ನೂ ಓದಿ: ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು