ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಮೊಮ್ಮಗನ ನಾಮಕರಣದ ಕಾರ್ಯಕ್ರಮವು ಮಾ.16ರಂದು ಅದ್ಧೂರಿಯಾಗಿ ಜರುಗಿದೆ. ಸಂಭ್ರಮದ ಸುಂದರ ಫೋಟೋಗಳನ್ನು ಅಂಬರೀಶ್ ಸೊಸೆ ಅವಿವ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವ ಪುತ್ರನಿಗೆ ‘ರಾಣಾ ಅಮರ್ ಅಂಬರೀಶ್’ (Rana Amar Ambareesh) ಎಂದು ಹೆಸರಿಟ್ಟಿದ್ದಾರೆ.
ಇನ್ನೂ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ಸಿನಿಮಾ ಇಂಡಿಸ್ಟ್ರೀಗೆ ಎಂಟ್ರಿ ಕೊಟ್ಮೇಲೆ ಅಂಬರೀಶ್ ಎಂದು ಅವರು ಬದಲಿಸಿದ್ದರು. ಅವರ ಮೂಲ ಹೆಸರನ್ನೇ ರಾಣಾ ಹೆಸರಿನ ಜೊತೆ ಅಮರ್ ಮತ್ತು ಅಂಬರೀಶ್ ಎಂದು ಸೇರಿಸಿರೋದು ವಿಶೇಷ. ಇದನ್ನೂ ಓದಿ:ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು
ಇನ್ನೂ ಮಗನ ನಾಮಕರಣದ ಸಂಭ್ರಮದ ಫೋಟೋಗಳನ್ನು ಅವಿವ ಶೇರ್ ಮಾಡಿ ‘ರಾಣಾ ಅಮರ್ ಅಂಬರೀಶ್’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೂ ಮಗನ ನಾಮಕರಣದ ಸಂಭ್ರಮದಲ್ಲಿ ಅವಿವ ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಅಭಿಷೇಕ್ ಬಿಳಿ ಬಣ್ಣದ ಶೆರ್ವಾನಿ ಧರಿಸಿದ್ದಾರೆ.
ಅಂಬಿ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ಸುದೀಪ್ ದಂಪತಿ, ಗುರುಕಿರಣ್, ಪ್ರಣೀತಾ ಸುಭಾಷ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಇನ್ನೂ ಮನೆಮಗ ದರ್ಶನ್ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇರೋದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
2023ರ ಜೂನ್ 5ರಂದು ಅಭಿಷೇಕ್ ಮತ್ತು ಅವಿವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಕಳೆದ ವರ್ಷ ನವೆಂಬರ್ 12ರಂದು ಗಂಡು ಮಗುವಿಗೆ ಅವಿವ ಜನ್ಮ ನೀಡಿದರು.