ಬಳ್ಳಾರಿ: ಪುಡಿ ರೌಡಿಗಳಂತೆ ಸರ್ಕಾರಿ ಶಾಲೆಯಲ್ಲಿ, ಸಮವಸ್ತ್ರದಲ್ಲೇ ಶಾಲಾ ಕೊಠಡಿಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಸಿರಗುಪ್ಪದ ವಿದ್ಯಾಲಯದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಹೊಡೆದಾಟದ ಭಯಾನಕ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಓರ್ವ ವಿದ್ಯಾರ್ಥಿಯನ್ನ ನೆಲಕ್ಕೆಡವಿ ಹತ್ತಾರು ವಿದ್ಯಾರ್ಥಿಗಳು ಏಕಕಾಲಕ್ಕೆ ಹಲ್ಲೆ ಮಾಡಿದ್ದರು. ನೆಲಕ್ಕೆ ಹಾಕಿ ಒದ್ದು ಹಲ್ಲೆ ಮಾಡಿರುವ ವಿದ್ಯಾರ್ಥಿಗಳು, ಶಾಲೆಯಲ್ಲಿ ಶಿಕ್ಷಕರಿದ್ದರೂ ಡೋಂಟ್ ಕೇರ್ ಎಂದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ: ತೆಲಂಗಾಣ ಸಿಎಂ
ಪುಡಿ ರೌಡಿಗಳಂತೆ ವರ್ತನೆ ಮಾಡಿ, ಹಲ್ಲೆ ಮಾಡಿರುವ ವಿದ್ಯಾರ್ಥಿಗಳು ಅಶ್ಲೀಲ ಪದಗಳನ್ನ ಬಳಸುತ್ತಾ ಹೊಡೆದಾಡಿದ್ದಾರೆ. ಹೊಡೆದಾಡಿಕೊಂಡಿರುವ ಎಲ್ಲರೂ 10ನೇ ತರಗತಿ ವಿದ್ಯಾರ್ಥಿಗಳು ಎನ್ನಲಾಗಿದೆ. ಇನ್ನೂ ಹಲ್ಲೆ ಮಾಡುತ್ತಾ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವ ವಿದ್ಯಾರ್ಥಿಗಳ ಈ ವರ್ತನೆಗೆ ಶಿಕ್ಷರೊಬ್ಬರ ಕುಮ್ಮಕ್ಕೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ದಾರಿಯಲ್ಲಿ ಹೋಗ್ತಿದ್ದವನಿಗೆ `ಮಚ್ಚಾ’ ಎಂದಿದ್ದಕ್ಕೆ ಮಚ್ಚಾನನ್ನು ಕರೆತಂದು ಚಾಕು ಇರಿತ