ಪುನೀತ್‌ ರಾಜ್‌ಕುಮಾರ್‌ ನೆನೆದ RCB ತರಬೇತುದಾರ ದಿನೇಶ್‌ ಕಾರ್ತಿಕ್‌

Public TV
1 Min Read
puneeth rajkumar dinesh karthik

– ಬೆಂಗಳೂರಿನ ಪ್ರತಿ ಮೂಲೆಯಲ್ಲೂ ಅಪ್ಪು ಫೋಟೊ ನೋಡಿದ್ದೇನೆ ಎಂದ ಮಾಜಿ ಕ್ರಿಕೆಟಿಗ

ರಾಜ್ಯದ ಎಲ್ಲೆಡೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ 50ನೇ ಹುಟ್ಟುಹಬ್ಬ ಆಚರಿಸಲಾಗಿದೆ. ಈ ಹೊತ್ತಿನಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ, ಆರ್‌ಸಿಬಿ ತರಬೇತುದಾರ ದಿನೇಶ್‌ ಕಾರ್ತಿಕ್‌ (Dinesh Karthik), ಅಪ್ಪು ನೆನೆದಿದ್ದಾರೆ.

ಇನ್‌ಸ್ಟಾದಲ್ಲಿ ವೀಡಿಯೋ ಮಾಡಿರುವ ದಿನೇಶ್‌ ಕಾರ್ತಿಕ್‌, ನಾನು ಮೂಲತಃ ಚೆನೈನವನು. ನನಗೆ ರಜಿನಿಕಾಂತ್, ಕಮಲ್‌ ಹಾಸನ್, ವಿಜಯ್ ಅಂದ್ರೆ ಇಷ್ಟ.‌ ಆದ್ರೆ RCBಗಾಗಿ ಮೂರು ವರ್ಷ ಆಡುವಾಗ ನನಗೆ ಅನ್ಸಿದ್ದು.. ಇಡೀ ಬೆಂಗಳೂರು ಒಬ್ಬರನ್ನ ಇಷ್ಟಪಡುತ್ತೆ ಅಂತ. ಅದು ಯಾರಂದ್ರೆ ಪುನೀತ್ ರಾಜ್‌ಕುಮಾರ್. ಪ್ರತಿ ಮೂಲೆಯಲ್ಲೂ ಅಪ್ಪು ಫೋಟೋವನ್ನ ನೋಡಿದ್ದೇನೆ. ಅವರು ಬೆಂಗಳೂರಿನ ಪ್ರತಿ ಮೂಲೆಯಲ್ಲೂ ಇದ್ದಾರೆ ಅನ್ಸುತ್ತೆ. ಆ ಮಟ್ಟಿಗೆ ಅಭಿಮಾನಿಗಳು ಅವರನ್ನ ಇಷ್ಟ ಪಡ್ತಾರೆ ಎಂದು ಪುನೀತ್‌ ಅವರನ್ನು ಕ್ರಿಕೆಟಿಗ ಕೊಂಡಾಡಿದ್ದಾರೆ.

 

View this post on Instagram

 

A post shared by Dinesh Karthik (@dk00019)

ಅವರ ಹುಟ್ಟುಹಬ್ಬದ ದಿನ ನಾನು ಅವ್ರಿಗೆ ನಮಿಸ್ತೇನೆ. ಮುಂದಿನ ಪೀಳಿಗೆಗೂ ಅವರು ಸ್ಪೂರ್ತಿಯಾಗಿರ್ತಾರೆ. ಅವರ ಸಿನಿಮಾಗಳನ್ನ ನೋಡಲು ಆಗಿಲ್ಲ. ಈಗಿನಿಂದಲೇ ನನಗೆ ಗೈಡ್ ಮಾಡಿ, ಯಾವೆಲ್ಲಾ ಸಿನಿಮಾಗಳನ್ನ ನೋಡಲಿ ಅಂತ ಎಂದು ವೀಡಿಯೋದಲ್ಲಿ ದಿನೇಶ್‌ ಕಾರ್ತಿಕ್‌ ಕೇಳಿದ್ದಾರೆ.

Share This Article