ಬೆಂಗಳೂರು : 10 ಲಕ್ಷ ಅಭ್ಯರ್ಥಿಗಳಿಗೆ ಯುವನಿಧಿ (Yuva Nidhi) ಯೋಜನೆ ಅಡಿ ಸಹಾಯ ಮಾಡುವುದು ಸರ್ಕಾರದ ಗುರಿ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ (Sharan Prakash Patil) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಡಿ.ಎಸ್. ಅರುಣ್ ಯುವನಿಧಿ ಯೋಜನೆ ಬಗ್ಗೆ ಪ್ರಶ್ನೆ ಕೇಳಿದ್ರು.
ಡಿ.ಎಸ್. ಅರುಣ್ ಮಾತಾಡಿ ಯುವನಿಧಿ ಯೋಜನೆ ಅಡಿ ಐದೂವರೆ ಲಕ್ಷ ಅಭ್ಯರ್ಥಿಗಳಿಗೆ 450 ಕೋಟಿ ಹಣ ಖರ್ಚು ಮಾಡೋದಾಗಿ ಸರ್ಕಾರ ಹೇಳಿತ್ತು. ಆದರೆ 5.5 ಲಕ್ಷ ವಿದ್ಯಾರ್ಥಿಗಳು ಪೈಕಿ 2.5 ಲಕ್ಷ ಜನ ಮಾತ್ರ ಅರ್ಜಿ ಹಾಕಿದ್ದಾರೆ. ಅದರಲ್ಲೂ 1.74 ಲಕ್ಷ ಅರ್ಜಿಗಳಿಗೆ ಮಾತ್ರ ಹಣ ಹಾಕಲಾಗಿದೆ. ಯುವನಿಧಗೆ ಅರ್ಜಿ ಹಾಕೋದು ಹೇಗೆ ಅಂತ ಅಭ್ಯರ್ಥಿಗಳಿಗೆ ಗೊತ್ತಿಲ್ಲ. ಯುವನಿಧಿ ಯೋಜನೆ ಅಡಿ ಕೊಟ್ಟ ಹಣ ಸರಿಯಾಗಿ ಉಪಯೋಗ ಆಗ್ತಿದೆಯಾ ಅಂತ ಮೌಲ್ಯಮಾಪನ ಆಗಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯೋಜನೆ ಬಗ್ಗೆ ಮಾಹಿತಿ ಇಲ್ಲ.ಅರ್ಜಿ ತುಂಬೋವಾಗ ಸಮಸ್ಯೆ ಅಂತ ಬರ್ತಿದೆ. ಅನೇಕ ವಿವಿಗಳಲ್ಲಿ ಅಂಕಪಟ್ಟಿ ಕೊಡ್ತಿಲ್ಲ. ಅಂಕಪಟ್ಟಿ ಇಲ್ಲದೆ ಹೋದ್ರೆ ಯೋಜನೆಗೆ ಅರ್ಜಿ ಹಾಕಲು ಆಗೊಲ್ಲ. ಈ ಬಗ್ಗೆ ಕ್ರಮವಾಗಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಕೇವಲ 1 ಪಂದ್ಯವಾಡಿ 869 ಕೋಟಿ ನಷ್ಟ – ಭಾರೀ ಸಂಕಷ್ಟದಲ್ಲಿ ಪಾಕ್ ಬೋರ್ಡ್
ಇದಕ್ಕೆ ಸಚಿವ ಶರಣು ಪ್ರಕಾಶ್ ಪಾಟೀಲ್ ಉತ್ತರ ನೀಡಿ, ಯುವನಿಧಿ ಯೋಜನೆ ಅಡಿ ಈವರೆಗೆ 2,62,20,7 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ. ಇದರಲ್ಲಿ 1,74,170 ಫಲಾನುಭವಿಗಳಗೆ ಯುವನಿಧಿ ಹಣ ಹಾಕಲಾಗಿದೆ. 16,648 ಫಲಾನುಭವಿಗಳಿಗೆ ಹಣ ಹಾಕೋದು ಬಾಕಿ ಇದೆ. ಎಷ್ಟೇ ಜನ ನೋಂದಣಿ ಆದರು ನಾವು ಅವರಿಗೆ ಹಣ ಕೊಡ್ತೀವಿ. ಯುವನಿಧಿ ಈಗ ಪ್ರಾರಂಭಿಕ ಹಂತದಲ್ಲಿ ಇದೆ. ನಮ್ಮ ಟಾರ್ಗೆಟ್ 10 ಲಕ್ಷ ಅಭ್ಯರ್ಥಿಗಳಿಗೆ ಕೊಡಬೇಕು ಅಂತ ಇದೆ. ಅರ್ಜಿ ಹಾಕೋಕೆ ಮುಕ್ತ ಅವಕಾಶ ಇದ್ದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಹಾಕಬಹುದು ಅಂತ ತಿಳಿಸಿದರು.
1,74,170 ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆ ಅಡಿ ಹಣ ಹಾಕಲಾಗ್ತಿದೆ. ಡಿಗ್ರಿ ಮುಗಿಸಿ 6 ತಿಂಗಳು ಆಗಬೇಕು. ಆದಾದ ನಂತರ ಹಣ ಪಾವತಿ ಆಗಲಿದೆ. ಯುವನಿಧಿ ಯೋಜನೆ ಅಡಿ ಕೊಡ್ತಿರೋ ಹಣ ಸರಿಯಾಗಿ ಬಳಕೆ ಆಗ್ತಿದೆಯಾ ಅಂತ ಮೌಲ್ಯಮಾಪನ ಮಾಡಲಾಗ್ತಿದೆ. ಮೌಲ್ಯಮಾಪನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಅಭ್ಯರ್ಥಿಗಳು ಹಣ ಬೇಕಾ ಬೇಡಾ ಅಂತ ಮಾಹಿತಿ ಕೊಡಲು ಈ ಹಿಂದೆ ಪ್ರತಿ ತಿಂಗಳು ಮಾಹಿತಿ ಕೊಡಬೇಕಾಗಿತ್ತು. ಈ ತಿಂಗಳಿಂದ 3 ತಿಂಗಳಿಗೊಮ್ಮೆ ಅಭ್ಯರ್ಥಿಗಳು ಮಾಹಿತಿ ಅಪ್ ಲೋಡ್ ಮಾಡಲು ಅವಕಾಶ ಕೊಡಲಾಗ್ತಿದೆ. ನಮ್ಮ ಸರ್ಕಾರದ ಬದ್ದತೆ ಇದೆ. ನಾವು ಕೊಟ್ಟಂತೆ ಯುವನಿಧಿ ಯೋಜನೆ ಅನುಷ್ಠಾನ ಮಾಡ್ತೀವಿ ಅಂತ ತಿಳಿಸಿದರು.