ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಹುಟ್ಟುಹಬ್ಬದ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಮಕ್ಕಳೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ. ಪುನೀತ್ ಸ್ಮಾರಕಕ್ಕೆ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ – ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಭ್ರಮಾಚರಣೆ
ರಾಘಣ್ಣ ಕುಟುಂಬಸ್ಥರು ಹಾಗೂ ಪುತ್ರಿಯರೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮಿಸಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಪ್ಪನಿಗಾಗಿ ತಯಾರಿಸಿದ ಕೇಕ್ ಅನ್ನು ಅಪ್ಪು ಪುತ್ರಿಯರು ಸ್ಮಾರಕದ ಮುಂದೆ ಇರಿಸಿದ್ದಾರೆ. ಈ ಮೂಲಕ ತಂದೆ ಹುಟ್ಟುಹಬ್ಬಕ್ಕೆ ಪುತ್ರಿಯರು ಶುಭಕೋರಿದ್ದಾರೆ. ಈ ವೇಳೆ, ಅಶ್ವಿನಿ ಜೊತೆಗಿನ ಸೆಲ್ಫಿಗಾಗಿ ಅನೇಕರು ಮುಗಿಬಿದ್ದಿದ್ದಾರೆ.
ಇನ್ನೂ ಅಪ್ಪು (Appu) ಹುಟ್ಟುಹಬ್ಬದ (Birthday) ಹಿನ್ನೆಲೆ ಸಮಾಧಿ ಬಳಿ ಅಪಾರ ಸಂಖೆಯಲ್ಲಿ ಜನ ಸೇರಿದ್ದಾರೆ. ಅಪ್ಪು ಇಷ್ಟಪಡುವ ನೆಚ್ಚಿನ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಅಂದಹಾಗೆ, ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ರೀ-ರಿಲೀಸ್ ಆದ ‘ಅಪ್ಪು’ ಚಿತ್ರವನ್ನು ನೋಡಲು ಪುತ್ರಿಯರೊಡನೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನರ್ತಕಿ ಥಿಯೇಟರ್‌ಗೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದರು. ಪುನೀತ್ ಅವರನ್ನು ಬೆಳ್ಳಿಪರದೆಯ ಮೇಲೆ ನೋಡ್ತಿದ್ದಂತೆ ಪತ್ನಿ ಅಶ್ವಿನಿ ಭಾವುಕರಾದರು.