– ಹಣ ವರ್ಗಾವಣೆಗೆ ಸಮಂಜಸ ಉತ್ತರ ಕೊಡದ ಹಿನ್ನೆಲೆ ದೂರು
ಬಳ್ಳಾರಿ: ವಿಜಯನಗರ (Vijayanagara) ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾಧಿಕಾರಿಯ ಮೇಲೆ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಇಲಾಖೆಯ ಕಚೇರಿಗೆ ಭೇಟಿ ನೀಡಿದ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನೆಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಉಪಲೋಕಾಯುಕ್ತರು, ಮಹಿಳಾಧಿಕಾರಿ ಅವರ ಮೊಬೈಲ್ ವಹಿವಾಟನ್ನು ಗನ್‌ಮ್ಯಾನ್ ಮೂಲಕ ಚೆಕ್ ಮಾಡಿಸಿದ್ದರು. ಹೀಗೆ ಚೆಕ್ ಮಾಡಿಸಿದಾಗ ಅಧಿಕ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ: ಕಿಚ್ಚ ಸುದೀಪ್ ಭಾಗಿ
ಹಣದ ವಹಿವಾಟಿನ ಕುರಿತು ಉಪಲೋಕಾಯುಕ್ತರು ಮಹಿಳಾಧಿಕಾರಿಯನ್ನು ವಿಚಾರಣೆ ನಡೆಸಿದಾಗ, ನನ್ನ ಗಂಡ ಕಳಿಸಿದ್ದಾರೆ. ನನ್ನ ಗಂಡ ರಾಜಕಾರಣಿ. ನನ್ನ ಪತಿ ಮಾಜಿ ಶಾಸಕ ಬಸವರಾಜ ದಡೇಸೂಗುರು. ಅವರೇ ಹಣ ಹಾಕಿದ್ದಾರೆ ಎಂದು ಹೇಳಿದ್ದರು. ಮಹಿಳಾಧಿಕಾರಿಯ ಈ ಉತ್ತರ ಸಮಾಧಾನ ತರದ ಹಿನ್ನೆಲೆ, ಭ್ರಷ್ಟಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿರುವುದರಿಂದ ಉಪಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಾಮರಾಜನಗರ| ಮರಕ್ಕೆ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು
ಉಪಲೋಕಾಯುಕ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇನ್ನೂ ದಾಖಲಾತಿ ಪರಿಶೀಲಿಸಿದ ವೇಳೆ 107 ಬಾಲ್ಯವಿವಾಹ ಪ್ರಕರಣಗಳ ಪೈಕಿ 49 ಎಫ್‌ಐಆರ್ ದಾಖಲಿಸಲಾಗಿದೆ. ಕಚೇರಿ ಅಧೀಕ್ಷಕ ನಾಗಭೂಷಣ ಅವರ ಫೋನ್ ಪೇ, ಯುಪಿಐ ಹಿಸ್ಟರಿ ಪರಿಶೀಲಿಸಿದಾಗ ಡಿಲೀಟ್ ಮಾಡಿರುವುದು ಕಂಡುಬಂದಿದೆ.