ಉಡುಪಿ: ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ದಂಪತಿ ಉಡುಪಿಯ (Udupi) ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.
ನವದಂಪತಿ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ (Sugunendra Theertha Swamiji) ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶ್ರೀಗಳು ಅಶೀರ್ವಚನ ನೀಡಿದ್ದು, ಶ್ರೀಕೃಷ್ಣನ ದರ್ಶನದಿಂದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ವಿವಾಹಕ್ಕೆ ವಿಶೇಷ ಅನುಗ್ರಹ ದೊರೆತಿದೆ. ಎಲ್ಲಾ ನವದಂಪತಿಗಳು ಕೃಷ್ಣನ ದರ್ಶನ ಮಾಡಬೇಕು. ಶ್ರೀಕೃಷ್ಣ ಕಲ್ಯಾಣದ ದೇವರು. ಇಂದು ಮದುವೆಯಾದ ತಕ್ಷಣ ಪಿಕ್‌ನಿಕ್ ಹೋಗ್ತಾರೆ. ಆದರೆ ತೇಜಸ್ವಿ ಸೂರ್ಯ ಅವರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಇದನ್ನೂ ಓದಿ: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಸದ ತೇಜಸ್ವಿ ಸೂರ್ಯ ದಂಪತಿ ಭೇಟಿ
ಸಂಸತ್ತಿನಲ್ಲಿ ವೇದಘೋಷ ಮೊಳಗಿಸಲು ಹೊರಗಿನಿಂದ ವೈದಿಕರನ್ನು ಕರೆಸುವ ಅಗತ್ಯ ಇಲ್ಲ, ನಮ್ಮ ಸಂಸದರೇ ಸಾಕು. ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ. ಇಡಿ ದೇಶಕ್ಕೆ ಇವರ ಸೇವೆ, ಸ್ಪೂರ್ತಿ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.
ಎರಡೂ ಕುಟುಂಬಗಳ ಸದಸ್ಯರು ಮಠದಲ್ಲಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಶ್ರೀ ಕೃಷ್ಣನ ರಾತ್ರಿಯ ಮಹಾಪೂಜೆ ಮತ್ತು ಪ್ರತಿದಿನ ನಡೆಯುವ ರಥೋತ್ಸವ ಸೇವೆಯಲ್ಲಿ ನವದಂಪತಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ರಾಹುಲ್ ಸೂಚನೆ ಮೇರೆಗೆ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ: ರವಿಶಂಕರ್ ಪ್ರಸಾದ್ ಕಿಡಿ