ಬೆಳಗಾವಿ: ಅನೈತಿಕ ಸಂಬಂಧ (Illicit Relationship) ಮುಚ್ಚಿ ಹಾಕಲು ಪುತ್ರ ಹಾಗೂ ಮೈದುನನ ಹೆಂಡತಿಯನ್ನು ಕೊಲೆಗೈದ ತಾಯಿ (Mother) ಹಾಗೂ ಪ್ರಿಯಕರನಿಗೆ (Lover) ಕೋರ್ಟ್ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿದೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಗ್ರಾಮದ ಸುಧಾ ಸುರೇಶ ಕರಿಗಾರ (32), ಪ್ರಿಯಕರ ರಾಮಪ್ಪ ಅಲಿಯಾಸ್ ರಮೇಶ ಕೆಂಚಪ್ಪ ಬಸ್ತವಾಡೆ (25) ಶಿಕ್ಷೆಗೆ ಗುರಿಯಾದವರು.
ಅಕ್ರಮ ಸಂಬಂಧಕ್ಕಾಗಿ ಬಾವಿಗೆ ದೂಕಿ ಸ್ವಂತ ಮಗನನ್ನು (Son) ಕೊಂದಿದ್ದಲ್ಲದೇ ಮಹಿಳೆಯೊಬ್ಬಳನ್ನು ಮಲಗಿದ್ದಾಗಲೇ ಬೆಂಕಿ ಹಚ್ಚಿ ಸುಟ್ಟಿರುವ ಆರೋಪದ ಮೇಲೆ ಸುಧಾ ಸುರೇಶ ಕರಿಗಾರ ಮತ್ತು ಆಕೆಯ ಪ್ರಿಯಕರ ರಮೇಶ ಕೆಂಚಪ್ಪ ಬಸ್ತವಾಡೆ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ನನ್ನ ಕಪಾಳಕ್ಕೆ 10-15 ಬಾರಿ ಹೊಡೆದಿದ್ದಾರೆ – ನಾನು ಅಮಾಯಕಿ ಎಂದ ರನ್ಯಾ
ಸಹಜ ಸಾವು ಎನ್ನುವಂತೆ ಬಿಂಬಿಸಲಾಗಿದ್ದ ಈ ಎರಡೂ ಕೊಲೆ ಪ್ರಕರಣ ಭೇದಿಸುವಲ್ಲಿ ಹುಕ್ಕೇರಿ ಪೊಲೀಸರು (Hukkeri Police) ಯಶಸ್ವಿಯಾಗಿದ್ದರು. ಆರೋಪಿ ಸುಧಾ ತನ್ನ ಗಂಡನ ಅಣ್ಣನ ಪತ್ನಿ ಭಾಗ್ಯಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಆರೋಪಿಗಳ ಪೂರ್ವನಿಯೋಜಿತ ಕೃತ್ಯ ಬೆಳಕಿಗೆ ಬಂದಿತ್ತು.
ಪ್ರಸ್ತುತ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಅವರು ಹುಕ್ಕೇರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಸಹಜ ಸಾವು ಎಂದು ಬಿಂಬಿತವಾಗಿದ್ದ ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಅಂದಿನ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಗದಗ| ಹೋಳಿ ಆಚರಿಸಿ ಕೆರೆಯಲ್ಲಿ ಈಜಲು ಹೋದ ಬಾಲಕ ಸಾವು
2019 ಡಿ.9ರಂದು ನಡೆದ ಭಾಗ್ಯಶ್ರೀ ಕೊಲೆ ಪ್ರಕರಣದಲ್ಲಿ ಈ ಇಬ್ಬರನ್ನೂ ದೋಷಿ ಎಂದು ಪರಿಗಣಿಸಿದ ನ್ಯಾಯಾಲಯವು, ಜೀವಾವಧಿ ಶಿಕ್ಷೆ ಹಾಗೂ 2.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಸರ್ಕಾರಿ ಅಭಿಯೋಜಕರಾಗಿ ವೈ.ಜಿ.ತುಂಗಳ ವಾದ ಮಂಡಿಸಿದ್ದರು.
ಸ್ವಂತ ಮಗನನ್ನೇ ಬಾವಿಗೆ ದೂಡಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಆಗಸ್ಟ್ 11 ರಂದು ಸುಧಾಗೆ ಜೀವಾವಧಿ ಶಿಕ್ಷೆಯಾಗಿತ್ತು.