– ರಸ್ತೆಯಲ್ಲೇ ಮಕ್ಕಳ ಗೋಳಾಟ
ಮಂಡ್ಯ: ಆ ತಾಯಿ ತನ್ನ ಮುದ್ದಾದ ಎರಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಭವಷ್ಯವನ್ನು ಉಜ್ವಲಗೊಳಿಸಲು ಸಾಕಷ್ಟು ಕನಸು ಕಂಡಿದ್ದರು. ಆದರೆ ಕ್ರೂರ ವಿಧಿ ಮಕ್ಕಳ ಎದುರೆ ದಾರುಣವಾಗಿ ಆ ತಾಯಿ ಜೀವವನ್ನು ಪಡೆದಿದೆ. ಇದೀಗ ಆ ಮಕ್ಕಳು ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು. ಮಂಡ್ಯದ (Mandya) ಮಳವಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಕ್ಕಳ ಎದುರಲ್ಲೇ ಹೆತ್ತ ತಾಯಿ ಜೀವ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಮದ್ದೂರಿನ ಕುಂದೂರು ಗ್ರಾಮದ ಶಿಲ್ಪಾ ಮೃತ ದುರ್ದೈವಿ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ವೃದ್ದ ಸಾವು..? – 2 ಗ್ರಾಮಗಳ ಜನರಿಗೆ ವಾಂತಿ ಭೇದಿ ಮೈ-ಕೈ ನೋವು
ಶಿಲ್ಪಾ ನಿತ್ಯ ತಮ್ಮ ಸ್ಕೂಟರ್‌ನಲ್ಲೇ ಮಕ್ಕಳಿಬ್ಬರನ್ನು ಶಾಲೆಗೆ ಬಿಡೋದು ಕರೆತರುವ ಕೆಲಸ ಮಾಡ್ತಿದ್ರು. ಎಂದಿನಂತೆ ಮಳವಳ್ಳಿಯ ಶಾಲೆಯಿಂದ ಮನೆಗೆ ಕರೆತರುವಾಗ ಯಮಸ್ವರೂಪಿಯಾಗಿ ಬಂದ ಬೊಲೆರೊ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಮಳವಳ್ಳಿ ಕೊಳ್ಳೆಗಾಲದ ರಸ್ತೆಯಲ್ಲಿ ಹೋಗುವ ವೇಳೆ ರಸ್ತೆಯಿಂದ ಬಲಬದಿಗೆ ತಿರುಗಿಸಿದಾಗ ವೇಗವಾಗಿ ಬಂದ ಬೊಲೆರೋ ಸ್ಕೂಟರ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಹೆಲ್ಮೆಟ್ ಧರಿಸಿದ್ರೂ ಶಿಲ್ಪಾ ಹಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ರೂರ ವಿಧಿ ಮಕ್ಕಳ ಎದುರೇ ತಾಯಿಯ ಪ್ರಾಣಪಕ್ಷಿಯನ್ನು ಕೊಂಡೊಯ್ದಿದೆ.
ಅಮ್ಮ ಅಪಘಾತಕ್ಕೆ (Accident) ಸ್ಥಳದಲ್ಲೇ ಉಸಿರು ಚೆಲ್ಲಿದರೆ.. ರಸ್ತೆಯ ಆ ಬದಿ ಮಕ್ಕಳಿಬ್ಬರೂ ಅಮ್ಮ ಅಮ್ಮ ಎಂದು ಗೋಳಾಡುತ್ತಿದ್ದು ಎಂತಹವರ ಮನಸ್ಸನ್ನು ಕದಲಿಸುವಂತಿತ್ತು. 7 ವರ್ಷದ ಅನನ್ಯ, 5 ವರ್ಷದ ಮಾನ್ಯಗೆ ಸಣ್ಣಪುಟ್ಟ ಗಾಯಗಳಾಗಿತ್ತು. ರಕ್ತ ಸುರಿಯುತ್ತಿದ್ರೂ ಮಕ್ಕಳಿಬ್ಬರ ಬಾಯಲ್ಲಿ ಒಂದೇ ಪದ ಅದು ಅಮ್ಮ.. ಅಮ್ಮ.. ಆದರೆ ಮಕ್ಕಳಿಬ್ಬರೂ ತನ್ನನ್ನು ಕರೆಯುತ್ತಿದ್ರೂ ತಾಯಿ ಮಾತ್ರ ಎದ್ದು ಬಂದು ಸಮಾಧಾನ ಮಾಡುವ ಸ್ಥಿತಿಯಲ್ಲಿರಲಿಲ್ಲ. ಈ ದೃಶ್ಯ ಕಂಡವರೂ ರಸ್ತೆಯಲ್ಲಿ ಕಣ್ಣೀರು ಹಾಕಿದ್ದು ಸುಳ್ಳಲ್ಲ.
ಸದ್ಯ ಬೊಲೆರೊ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಪಘಾತಕ್ಕೆ ಬೊಲೆರೋ ವಾಹನ ಚಾಲಕನ ಅಜಾಗರೂಕತೆ ಹಾಗೂ ರಸ್ತೆಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆನಡಾ ಅಮೆರಿಕದ ಭಾಗವಾಗಲ್ಲ – ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ಮಾರ್ಕ್ ಕಾರ್ನಿ ಘೋಷಣೆ
ಡಿವೈಡರ್‌ಗೆ ಕೆಟಿಎಂ ಬೈಕ್ ಡಿಕ್ಕಿ – ಓರ್ವ ಸಾವು:
ಇನ್ನೂ ಮಂಡ್ಯದಲ್ಲೇ ಮತ್ತೊಂದು ಕಡೆ ಅಪಘಾತಕ್ಕೆ ಓರ್ವ ಜೀವ ಬಿಟಿದ್ದಾನೆ. ಮಂಡ್ಯ ನಗರದಲ್ಲಿ ಹಾದು ಹೋಗುವ ಹಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತಮಿಳುನಾಡು ರಾಜ್ಯದ ನೋಂದಣಿಯ ಕೆಎಟಿಎಂ ಬೈಕ್ ಅಪಘಾತವಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಕೆಟಿಎಂ ಬೈಕ್‌ನಲ್ಲಿ ಇಬ್ಬರು ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಸವಾರ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ವೇಗವಾಗಿ ಇದ್ದ ಪರಿಣಾಮ ಡಿವೈಡರ್‌ನ ಮೇಲತ್ತಿ ಮರಕ್ಕೆ ಡಿಕ್ಕಿಯಾಗಿದೆ.
ಡಿವೈಡರ್ ಬಳಿಯಿದ್ದ ಬೇವಿನಮರಕ್ಕೆ ಬೈಕ್ ಡಿಕ್ಕಿ ಆಗಿದೆ. ಡಿಕ್ಕಿ ರಭಸಕ್ಕೆ ಬೇವಿನಮರ ಮುರಿದಿದೆ. ಇದರಿಂದ ಸ್ಥಳದಲ್ಲೇ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಮತ್ತೋರ್ವನಿಗೆ ಗಾಯವಾಗಿದೆ. ಗಾಯಾಳುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಶುಲ್ಕ – ತಿಂಗಳಿಗೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಎಷ್ಟು?