ಬೆಂಗಳೂರು: ದರ ಏರಿಕೆಯಿಂದ ತತ್ತರಿಸಿರುವ ಬೆಂಗಳೂರು ಮಂದಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮನೆಮನೆಯಿಂದ ಸಂಗ್ರಹಿಸುವ ತ್ಯಾಜ್ಯಕ್ಕೆ (Garbage) ಏಪ್ರಿಲ್ 1ರಿಂದ ಸೇವಾ ಶುಲ್ಕ (Service Charge) ವಿಧಿಸಲು ಸರ್ಕಾರ ಮುಂದಾಗಿದೆ.
ಕಳೆದ ಐದಾರು ವರ್ಷದಿಂದ ಬೆಂಗಳೂರಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಕಾರ್ಯರೂಪಕ್ಕೆ ತರಲು ಬಿಬಿಎಂಪಿ (BBMP) ಮುಂದಾಗಿದೆ.
ಆರು ತಿಂಗಳಿಗೊಮ್ಮೆ ಆಸ್ತಿ ತೆರಿಗೆ ಜೊತೆ ಈ ಸೇವಾ ಶುಲ್ಕ ಸಂಗ್ರಹಿಸಲಾಗುತ್ತದೆ. ವಾರ್ಷಿಕ 800 ಕೋಟಿ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ.
ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಇದು ತೆರಿಗೆ (Tax) ಅಲ್ಲ. ಇದು ಸರ್ವಿಸ್ ಚಾರ್ಜ್ ಆಗಿದ್ದು, ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ತಿಳಿಸಿದರು.
ವಸತಿ ಕಟ್ಟಡಗಳಿಗೆ (ಮಾಸಿಕ)
* 600 ಚದರಡಿವರೆಗೆ – 10 ರೂ.
* 601-1000 ಚದರಡಿ – 50 ರೂ.
* 1001-2000 ಚದರಡಿ – 100 ರೂ.
* 2001-3000 ಚದರಡಿ – 150 ರೂ.
* 3001-4000 ಚದರಡಿ – 200 ರೂ.
* 4000 ಚದರಡಿ ಮೇಲ್ಪಟ್ಟು – 400 ರೂ.
* ನಿವೇಶನ ಪ್ರತಿ ಚದರಡಿಗೆ – 20 ಪೈಸೆ
ವಾಣಿಜ್ಯ ಕಟ್ಟಡಗಳಿಗೆ (ಮಾಸಿಕ)
* ನಿತ್ಯ 5 ಕೆಜಿವರೆಗೆ – 500 ರೂ.
* ನಿತ್ಯ 10 ಕೆಜಿವರೆಗೆ – 1400 ರೂ.
* ನಿತ್ಯ 25 ಕೆಜಿವರೆಗೆ – 3500 ರೂ.
* ನಿತ್ಯ 50 ಕೆಜಿವರೆಗೆ – 7000 ರೂ.
* ನಿತ್ಯ 100 ಕೆಜಿವರೆಗೆ – 14000 ರೂ.