ಚಿತ್ರದುರ್ಗ: ತಡರಾತ್ರಿ ರಸ್ತೆಯಲ್ಲಿ ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿದ ಪಿಎಸ್ಐ (PSI) ಮೇಲೆ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗದ (Chitradurga) ಖಾಸಗಿ ಹೋಟೇಲ್ ಬಳಿ ನಡೆದಿದೆ.
ಚಿತ್ರದುರ್ಗದ ತುರುವನೂರು (Turuvanur) ರಸ್ತೆಯಲ್ಲಿ ಮಧುಗಿರಿ (Madhugiri) ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ & ಟೀಂ ತಡರಾತ್ರಿಯಲ್ಲಿ ನಿಂತಿದ್ದರು. ಆಗ ಇಷ್ಟೊತ್ತಲ್ಲಿ ರಸ್ತೆಯಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ನಗರಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ಹನುಮಂತೇಗೌಡ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಅಲ್ಲದೇ ಹಲ್ಲೆ ವೇಳೆ ಪಿಎಸ್ಐ ಗಾದಿಲಿಂಗಪ್ಪ ಅವರ ಕೈಬೆರಳಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಹೋಳಿ ಆಚರಣೆ ಬಳಿಕ ಕೆರೆಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಶವವಾಗಿ ಪತ್ತೆ
ಹೀಗಾಗಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಪೊಲೀಸರಿಂದಲೇ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹನುಮಂತೇಗೌಡ ಪ್ರತ್ಯಾರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯಾದ ಹನುಮಂತೇಗೌಡರ ಕಾರಿನ ಚಾಲಕ ರಂಗಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಊಟ ಮುಗಿಸಿ ಹೊರಡುವ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ನಮ್ಮ ಸಾಹೇಬರನ್ನು ಏಕವಚನ ಹಾಗೂ ಅವಾಚ್ಯ ಶಬ್ದದಿಂದ ನಿಂದಿಸಿದರು. ಆಗ ಪಿಎಸ್ಐಗೆ ನಮ್ಮ ಸಾಹೇಬರು ಕೂಡ ನಿಂದಿಸಿದ್ದು, ಪರಸ್ಪರ ಹಲ್ಲೆ ನಡೆಸಿದ ಪರಿಣಾಮ ಘಟನೆ ನಡೆಯಿತೆಂದು ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: Gold Smuggling Case| ಪ್ರಭಾವಿ ನಾಯಕನ ಮೇಲೆ ಜರ್ಮನಿ ಟೂರ್ ಬಗ್ಗೆ ಅನುಮಾನ