ಬೆಂಗಳೂರು: ರಾಜ್ಯ ರಾಜಧಾನಿಯನ್ನು ಇಬ್ಬಾಗ ಮಾಡೋ ʻಗ್ರೇಟರ್ ಬೆಂಗಳೂರುʼ (Greater Bengaluru) ವಿಧೇಯಕ ಖಂಡಿಸಿ ಇಂದು ಜೆಡಿಎಸ್ (JDS) ಪ್ರತಿಭಟನೆ ನಡೆಸಿತು. ಫ್ರೀಡಂ ಪಾರ್ಕ್ ನಲ್ಲಿ ಬೆಂಗಳೂರು ನಗರ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ MLC, ಮಾಜಿ ಎಂಎಲ್ಸಿಗಳು ಭಾಗಿಯಾಗಿದ್ರು. ಸರ್ಕಾರ ನಡೆ ಖಂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ರು.
ಈ ವೇಳೆ ಮಾತನಾಡಿದ ಬೆಂಗಳೂರು (Bengaluru) ನಗರ ಜೆಡಿಎಸ್ ನಗರ ಘಟಕ ಅಧ್ಯಕ್ಷ ರಮೇಶ್ ಗೌಡ, ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಿಂದ ಜನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಜನರಿಗೆ ನಿತ್ಯ ನರಕ ತೋರಿಸುತ್ತಿದ್ದಾರೆ. ಕೆಂಪೇಗೌಡರು ಬೆಂಗಳೂರು ಕಟ್ಟಿದ್ದರು. ಈ ಸರ್ಕಾರ ಬೆಂಗಳೂರನ್ನ ಛಿದ್ರ ಛಿದ್ರ ಮಾಡ್ತಿದ್ದಾರೆ. ಬೆಂಗಳೂರನ್ನ 7 ಭಾಗ ಮಾಡಲು ಹೊರಟಿದ್ದಾರೆ. ರಿಯಲ್ ಎಸ್ಟೇಟ್ ಮಾಡಲು 7 ಭಾಗ ಮಾಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ
ಬೆಂಗಳೂರು ಅನೇಕ ಸಮಸ್ಯೆ ಎದುರಿಸುತ್ತಿದೆ. ನೀರಿಲ್ಲ, ಟ್ರಾಫಿಕ್ ಜಾಮ್ ಸೇರಿ ಅನೇಕ ಸಮಸ್ಯೆ ಇದೆ. ಈ ಸರಕಾರದಲ್ಲಿ ಜನರು ನಿತ್ಯ ಸತ್ತು ಬದುಕುತ್ತಿದ್ದಾರೆ. ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಬಾರದು. ಕೂಡಲೇ ಸರ್ಕಾರ ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಪಡೆಯಬೇಕು. ಸರ್ಕಾರ ಬಿಲ್ ವಾಪಸ್ ಪಡೆಯದೇ ಹೋದ್ರೆ ಸಿಎಂ ಮತ್ತು ಸಚಿವ ಕಾರ್ಯಕ್ರಮಗಳಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡೋ ಕೆಲಸ ಜೆಡಿಎಸ್ ಮಾಡಲಿದೆ ಅಂತ ಎಚ್ಚರಿಕೆ ಕೊಟ್ರು. ಇದನ್ನೂ ಓದಿ: 2 ವರ್ಷದಲ್ಲಿ ದುಬೈಗೆ 52 ಟ್ರಿಪ್ – ಈ ಪೈಕಿ 45 ಬಾರಿ ಒಂದೇ ದಿನದಲ್ಲಿ ಹೋಗಿ ಬಂದಿದ್ದ ರನ್ಯಾ
ಈ ಸರ್ಕಾರದಲ್ಲಿ ಹಾಲಿನ ದರ, ಟಿಕೆಟ್ ದರ ಎಲ್ಲವೂ ಜಾಸ್ತಿ ಆಗಿದೆ. ಸರ್ಕಾರ ರಾಜ್ಯದ ಹಿತ ಕಾಪಾಡುತ್ತಿಲ್ಲ. ಬೆಂಗಳೂರಿನಲ್ಲಿ ಕುಡಿಯೋಕೆ ನೀರು ಕೊಡ್ತಿಲ್ಲ. ಆದರು ನೀರಿನ ದರ ಏರಿಕೆ ಮಾಡ್ತಿದ್ದಾರೆ. ಬೆಂಗಳೂರಿಗೆ ಶಾಪ ವಿಮೋಚನೆ ಆಗಬೇಕಾದ್ರೆ ಈ ಸರ್ಕಾರವನ್ನ ಜನರು ಕಿತ್ತು ಹಾಕಬೇಕು ಅಂತ ಮನವಿ ಮಾಡಿದ್ರು. ಇದನ್ನೂ ಓದಿ: ನಿಮ್ಮ ಉಗ್ರವಾದದ ದಾಖಲೆ ಪ್ರಪಂಚದ ಮುಂದಿದೆ: ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್‌ಗೆ ಭಾರತ ತಿರುಗೇಟು