ಚಂಡೀಗಢ: ಬಿಜೆಪಿಯ ಮುಂಡ್ಲಾನಾ ಮಂಡಲ ಅಧ್ಯಕ್ಷ (BJP Mundlana Mandal President) ಮತ್ತು ಗ್ರಾಮ ಸಂಖ್ಯಾದಾರ ಸುರೇಂದ್ರ (Surendra Jawahar) ಅವರನ್ನು ಶುಕ್ರವಾರ ರಾತ್ರಿ ಹರ್ಯಾಣದ ಸೋನಿಪತ್‌ನ (Sonipat) ಜವಾಹರ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಭೂ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ಮೋನು ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳೀಯ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದೆ. ಶುಕ್ರವಾರ ರಾತ್ರಿ 9:15ರ ಸುಮಾರಿಗೆ ಮಂಡಲ ಅಧ್ಯಕ್ಷ ಸುರೇಂದ್ರ ಜವಾಹರ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ದೃಶ್ಯದಲ್ಲಿ ಸುರೇಂದ್ರ ಮನೆಯ ಹೊರಗಿನ ಬೀದಿಯಲ್ಲಿ ನಿಂತಿದ್ದರು. ನೆರೆಮನೆಯ ಮೋನು ಸ್ಥಳಕ್ಕೆ ಬಂದು ಸುರೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ. ಸುರೇಂದ್ರ ತಪ್ಪಿಸಿಕೊಂಡು ಹತ್ತಿರದ ದಿನಸಿ ಅಂಗಡಿಗೆ ನುಗ್ಗಿದ ವೇಳೆ ದಾಳಿಕೋರ ಒಳಗೆ ಹೋಗಿ ಎರಡನೇ ಗುಂಡು ಹಾರಿಸಿದ್ದಾನೆ. ದಾಳಿಕೋರ ಮೋನು ಹಣೆಗೆ ಒಂದು ಗುಂಡು, ಹೊಟ್ಟೆಗೆ ಎರಡನೇ ಗುಂಡು ಹಾರಿಸಿ ಪರಾರಿಯಾಗಿದ್ದ. ಇದನ್ನೂ ಓದಿ: 2 ವರ್ಷದಲ್ಲಿ ದುಬೈಗೆ 52 ಟ್ರಿಪ್ – ಈ ಪೈಕಿ 45 ಬಾರಿ ಒಂದೇ ದಿನದಲ್ಲಿ ಹೋಗಿ ಬಂದಿದ್ದ ರನ್ಯಾ
ಮಂಡಲ ಅಧ್ಯಕ್ಷ ಸುರೇಂದ್ರ ಆರೋಪಿ ಮೋನುವಿನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಜಮೀನನ್ನು ಖರೀದಿಸಿದ್ದರು. ಇದರಿಂದಾಗಿ ಸುರೇಂದ್ರನ ಮೇಲೆ ಮೋನು ದ್ವೇಷ ಇಟ್ಟುಕೊಂಡಿದ್ದ. ಸುರೇಂದ್ರನಿಗೆ ಖರೀದಿಸಿದ ಜಮೀನಿನಲ್ಲಿ ಕಾಲಿಡದಂತೆ ಮೋನು ಬೆದರಿಕೆ ಹಾಕಿದ್ದ. ಆದರೆ ಇದಕ್ಕೆ ಜಗ್ಗದ ಸುರೇಂದ್ರ ಭೂಮಿಯನ್ನು ಉಳುಮೆ ಮಾಡಿದ್ದ. ಇದರಿಂದ ಕೋಪಗೊಂಡ ಮೋನು ಕೊಲೆ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾ ರಾವ್ ಆಪ್ತ ವಶಕ್ಕೆ
ಪೊಲೀಸರು ಶವವನ್ನು ಖಾನ್ಪುರ್ ಕಲಾನ್ ಗ್ರಾಮದಲ್ಲಿರುವ ಭಗತ್ ಫೂಲ್ ಸಿಂಗ್ ಸರ್ಕಾರಿ ಮಹಿಳಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮೃತ ಸುರೇಂದ್ರ ಪತ್ನಿ ದೂರಿನ ಆಧರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿ ಕೆಲವೆ ಹೊತ್ತಿನಲ್ಲಿ ಮೋನುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಉಗ್ರವಾದದ ದಾಖಲೆ ಪ್ರಪಂಚದ ಮುಂದಿದೆ: ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್‌ಗೆ ಭಾರತ ತಿರುಗೇಟು