ಬೆಳಗಾವಿ: ನೆಲಮಂಗಲದ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಟ್ರಕ್ ಬಿದ್ದು ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅಂತಹದ್ದೇ ಘಟನೆ ಬೆಳಗಾವಿಯ (Belagavi) ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ನಡೆದಿದೆ.
ರಾಮದುರ್ಗ ತಾಲೂಕಿನ ಬಾಗೋಜಿಕೊಪ್ಪದ ನಿವಾಸಿಗಳಾದ ಪರಪ್ಪ ಮತ್ತು ನಾಗಪ್ಪ ಎಂಬುವವರು ಇಂದು ಬೆಳಗ್ಗೆ ತಮ್ಮ ವ್ಯಾಗನರ್ ಕಾರನ್ನು ಸರ್ವಿಸ್ ಮಾಡಿಸಬೇಕು ಎಂದು ಬೆಳಗಾವಿಗೆ ಬರುತ್ತಿದ್ದರು. ಇದನ್ನೂ ಓದಿ: ಸ್ವಾಮೀಜಿ ಕಾಲಿಗೆ ಬಿದ್ದ ಪೊಲೀಸರ ವಿರುದ್ಧ ಶಿಸ್ತು ಕ್ರಮ – ಬೇರೆ ಬೇರೆ ಠಾಣೆಗೆ ವರ್ಗಾವಣೆ
ಈ ಸಂದರ್ಭದಲ್ಲಿ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿಯೊಂದು (Cement Mixer Lorry) ಡಿವೈಡರ್‌ಗೆ ಡಿಕ್ಕಿಯಾಗಿ ಕಾರಿನ ಮೇಲೆ ಬಿದ್ದಿದೆ. ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಪರಪ್ಪ, ನಾಗಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ರೇನ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ 45 ನಿಮಿಷ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದ್ದಾರೆ. ಈಗ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.