ಗ್ಯಾರಂಟಿಗಳಿಗೆ SCSP – TSP ಹಣ ಬಳಕೆ – ದಲಿತರ ಎಷ್ಟು ಕೋಟಿ ಹಣ ಬಳಕೆ? ಇಲ್ಲಿದೆ ಲೆಕ್ಕ..

Public TV
2 Min Read
Karnataka Budget 2023 4 pre poll congress guarantee schemes to cost 57910 crore CM Siddaramaiah

– ನಮ್ಮ ಸರ್ಕಾರ ಮಾತ್ರವಲ್ಲ ಬಿಜೆಪಿ ಸರ್ಕಾರವೂ ಬಳಸಿದೆ: ಮಹದೇವಪ್ಪ ಸಮರ್ಥನೆ

ಬೆಂಗಳೂರು: ಎಸ್‌ಸಿ-ಎಸ್‌ಟಿ ಸಮುದಾಯದ (SC ST Community) ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Guarantee Scheme) ಬಳಸ್ತಿರೋ ವಿಷಯ ಪರಿಷತ್‌ನಲ್ಲಿಂದು ಕೋಲಾಹಲ ಎಬ್ಬಿಸಿದೆ.

Congress Guarantee Electricity

ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷಗಳು ಈ ವಿಚಾರ ಪ್ರಸ್ತಾಪಿಸಿದವು. ಸರ್ಕಾರವೇ ಕೊಟ್ಟಿರೋ ಮಾಹಿತಿಗಳ ಪ್ರಕಾರ, ಕಳೆದ 2 ವರ್ಷಗಳಲ್ಲಿ 19,084.72 ಕೋಟಿ ಹಣವನ್ನು ಗ್ಯಾರಂಟಿಗಾಗಿ ಬಳಕೆ ಮಾಡಲಾಗಿದೆ. ಈ ವಿಚಾರವಾಗಿ, ಸಮಾಜಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ-ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಧ್ಯೆ ಕಾವೇರಿದ ವಾಕ್ಸಮರವೇ ನಡೆಯಿತು. 1.50 ಕೋಟಿ ಜನರಿಗೆ ಅನ್ಯಾಯ ಆಗ್ತಿದೆ ಅಂತ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ರೋಷಾವೇಶಭರಿತವಾಗಿ ಮಾತಾಡಿದರು. ಇದನ್ನೂ ಓದಿ: Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್‌ಲಿಂಕ್‌: ಸಿಗುತ್ತಾ ಕೇಬಲ್‌, ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌? – ದರ ಎಷ್ಟು?

ಇದಕ್ಕೆ ಅಂಕಿ-ಅಂಶಗಳ ಸಮೇತ ಸಚಿವ ಮಹದೇವಪ್ಪ ಟಾಂಗ್ ಕೊಟ್ಟರು. ನಮ್ಮ ಸರ್ಕಾರ ಮಾತ್ರ ಬಳಸ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರವೂ ಬಳಸಿದೆ ಅಂದ್ರು. ಮಹದೇವಪ್ಪ ಬೆಂಬಲಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಎದ್ದು ನಿಂತರು. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸ್ತಿದ್ರು. ಇಬ್ಬರ ಮಧ್ಯೆಯೂ ಪದೇ ಪದೇ ಜೋರು ವಾಕ್ಸಮರ ನಡೀತು. ಕಾಂಗ್ರೆಸ್-ದೋಸ್ತಿ ಸದಸ್ಯರು ದನಿಗೂಡಿಸಿದ್ರು. ಸದನ ಗದ್ದಲದ ಗೂಡಾಗಿ ಸ್ವಲ್ಪ ಹೊತ್ತು ಕಲಾಪವನ್ನು ಸಭಾಪತಿಗಳು ಮುಂದೂಡಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಿದ ಕಿಡಿಗೇಡಿಗಳು – 8 ಮಂದಿ ಅಸ್ವಸ್ಥ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಎಷ್ಟು ಮೀಸಲಿಡಲಾಗಿತ್ತು? ಅದರಲ್ಲಿ ಪಂಚ ಗ್ಯಾರಂಟಿಗಳಿಗೆ ಎಷ್ಟು ಬಳಸಲಾಗಿದೆ ಅನ್ನೋದರ ಅಂಕಿ-ಅಂಶ ಇಲ್ಲಿದೆ. ಇದನ್ನೂ ಓದಿ: ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

ಯಾವುದಕ್ಕೆ ಎಷ್ಟು ಹಣ ಬಳಕೆ?
2025-26ರಲ್ಲಿ – 13,433.76 ಕೋಟಿ ರೂ.
* ಗೃಹಲಕ್ಷ್ಮಿಗೆ – 7,438.11 ಕೋಟಿ ರೂ.
* ಗೃಹಜ್ಯೋತಿಗೆ – 2,626 ಕೋಟಿ ರೂ.
* ಅನ್ನಭಾಗ್ಯಕ್ಕೆ – 1,670.76 ಕೋಟಿ ರೂ.
* ಶಕ್ತಿ ಯೋಜನೆಕ್ಕೆ – 1,537 ಕೋಟಿ ರೂ.
* ಯುವ ನಿಧಿಗೆ – 162 ಕೋಟಿ ರೂ.

2024-25ರಲ್ಲಿ – 39,122 ಕೋಟಿ ರೂ.
* ಎಸ್‌ಸಿಎಸ್‌ಪಿಯಿಂದ – 27,674 ಕೋಟಿ ರೂ.
* ಟಿಎಸ್‌ಪಿಯಿಂದ – 11,448 ಕೋಟಿ ರೂ.
* ಗ್ಯಾರಂಟಿಗೆ ಬಳಕೆ – 14,282 ಕೋಟಿ ರೂ.

2023-24ರಲ್ಲಿ – 35,222 ಕೋಟಿ ರೂ.
* ಎಸ್‌ಸಿಎಸ್‌ಪಿಯಿಂದ – 25,164 ಕೋಟಿ ರೂ.
* ಟಿಎಸ್‌ಪಿಯಿಂದ – 10,058 ಕೋಟಿ ರೂ.
* ಗ್ಯಾರಂಟಿಗೆ ಬಳಕೆ – 10,355 ಕೋಟಿ ರೂ.

Share This Article