ಬೆಂಗಳೂರು: ರಕ್ತಹೀನತೆ ಇರೋ ಕಟ್ಟಡ ಕಾರ್ಮಿಕರಿಗೆ ಕಂಚಿಕೆ ಮಾಡಿರೋ ನ್ಯೂಟ್ರಿಷನ್ ಕಿಟ್‌ನಲ್ಲಿ (Nutrition Kit) ದೊಡ್ಡ ಅಕ್ರಮವಾಗಿದೆ. ಈ ಕುರಿತು ತನಿಖೆ ನಡೆಸಬೇಕು ಅಂತ ಬಿಜೆಪಿ ಸದಸ್ಯ ರವಿಕುಮಾರ್ (N Ravikumar) ಕಾರ್ಮಿಕ ಸಚಿವರನ್ನ ಒತ್ತಾಯ ಮಾಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರವಿಕುಮಾರ್ ಪ್ರಶ್ನೆ ಕೇಳಿದ್ರು. ಕಾರ್ಮಿಕ ಇಲಾಖೆ (Labor Department) ಹಂಚಿಕೆ ಮಾಡಿರೋ ನ್ಯೂಟ್ರಿಷನ್ ಕಿಟ್ ನಲ್ಲಿ ಕೊಟ್ಟಿರೋ ಸಾಮಗ್ರಿಗಳಲ್ಲಿ ಅಕ್ರಮವಾಗಿದೆ. ಮಾರುಕಟ್ಟೆಯಲ್ಲಿ ಒಂದು ರೇಟ್ ಇದ್ದರೆ ಕಾರ್ಮಿಕ ಇಲಾಖೆ ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದೆ. ಮಹಾನಾರಯಣ ತೈಲ, ಚ್ಯವನ ಪ್ರಾಶ ಸೇರಿ ಹಲವು ಸಾಮಗ್ರಿಗಳಿಗೆ ಹೆಚ್ಚು ಹಣ ಕೊಡಲಾಗಿದೆ. ಮಾರುಕಟ್ಟೆಯಲ್ಲಿ 600-700 ರೂ.ಗೆ ಒಂದು ಕಿಟ್ ಸಿಗುತ್ತದೆ. ಆದರೆ ಕಾರ್ಮಿಕ ಇಲಾಖೆ ಒಂದು ಕಿಟ್‌ಗೆ 2,600 ರೂಪಾಯಿ ಕೊಡಲಾಗಿದೆ. ನ್ಯೂಟ್ರಿಷನ್ ಕಿಟ್ ಕೊಡೋದ್ರಲ್ಲಿ ಅಕ್ರಮವಾಗಿದೆ. ಕಿಟ್ ಪದಾರ್ಥಗಳನ್ನ ಸದನದಲ್ಲಿ ಪ್ರದರ್ಶನ ಮಾಡಿ ಆರೋಪ ಆಗ್ರಹಿಸಿದರು.
ಬ್ಲಾಸಂ ಅನ್ನೋ ಕಂಪನಿಗೆ ಕೊಡೋಕೆ ಕಿಟ್ ಹಂಚಿಕೆಯನ್ನ ಸ್ಲಿಪ್ಟ್ ಮಾಡಿ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್
ಇದಕ್ಕೆ ಸಚಿವ ಸಂತೋಷ್ ಲಾಡ್ (Santosh Lad) ಉತ್ತರ ನೀಡಿ, ರಕ್ತಹೀನತೆ ಇರೋ ಕಟ್ಟಡ ಕಾರ್ಮಿಕರಿಗೆ 75 ಕೋಟಿ ರೂ. ವೆಚ್ಚದಲ್ಲಿ ನ್ಯೂಟ್ರೀಷನ್ ಕಿಟ್ ಹಂಚಿಕೆ ಮಾಡಲಾಗಿದೆ. ಪ್ರತಿ ಜಿಲ್ಲೆಗೆ 26 ಸಾವಿರ ಕಿಟ್‌ಗಳನ್ನ ಹಂಚಿಕೆ ಮಾಡಿದ್ದೇವೆ. ಒಟ್ಟು 12 ಲಕ್ಷ ಕಿಟ್ ವಿತರಣೆ ಆಗಿದೆ. ಟೆಂಡರ್ ಪ್ರಕ್ರಿಯೆ ಮೂಲಕವೇ ಕಿಟ್ ಹಂಚಿಕೆ ಆಗಿದೆ. 75 ಕೋಟಿ ರೂ. ಬಳಕೆಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಕಿಟ್ ಹಂಚಿಕೆ ಮಾಡಿ ಒಂದು ವರ್ಷ ಆಗಿದೆ. ಯಾವುದೇ ಅಕ್ರಮ ನ್ಯೂಟ್ರಿಷನ್ ಕಿಟ್ ಕೊಡೋದ್ರಲ್ಲಿ ಆಗಿಲ್ಲ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ
ಬಿಜೆಪಿ ಅವಧಿಯಲ್ಲಿ ನ್ಯೂಟ್ರಿಷನ್ ಕಿಟ್ ಯೋಜನೆ ಅಪ್ರೂವ್ ಆಗಿದೆ. ಟೆಂಡರ್ ಪ್ರಕ್ರಿಯೆ ಮೂಲಕವೇ ಕಿಟ್ ಖರೀದಿ ಆಗಿದೆ. ಟೆಂಡರ್ ನಲ್ಲಿ ಲೋಪ ಆಗಿದ್ರೆ ಹೇಳಿ. ಟೆಂಡರ್ ಗೆ ನಾವು ಸಹಾಯ ಮಾಡಲು ಆಗೊಲ್ಲ. L1 ಗೆ ಕಿಟ್ ಪೂರೈಕೆಗೆ ಅವಕಾಶ ಕೊಡಲಾಗಿದೆ. ಕಿಟ್ ಕೊಟ್ಟು ಒಂದು ವರ್ಷ ಆಗಿದೆ. ಟೆಂಡರ್ ನಲ್ಲಿ ಯಾವುದೇ ಅಕ್ರಮವಾಗಿಲ್ಲ. ಎಲ್ಲದ್ದಕ್ಕೂ ಬಹಿರಂಗವಾಗಿ ಭ್ರಷ್ಟಾಚಾರ ಅಂತ ಹೇಳೋದಾದ್ರೆ ಹೇಗೆ? ಅಕ್ರಮದ ದಾಖಲಾತಿ ಇದ್ದರೆ ಕೊಡಿ ತನಿಖೆ ಮಾಡಿಸ್ತೀನಿ ಅಂತ ತಿಳಿಸಿದರು. ಇದನ್ನೂ ಓದಿ: ಕರಾವಳಿಯಲ್ಲಿ ನಿಷೇಧಿತ PFI ಮತ್ತೆ ಆಕ್ಟಿವ್? – ಅಕ್ರಮ ಪಿಸ್ತೂಲ್ ಮಾರಾಟ ಜಾಲ ಭೇದಿಸಿದ ಪೊಲೀಸರು