ವಾಷಿಂಗ್ಟನ್: 178 ಜನರನ್ನು ಹೊತ್ತು ಅಮೆರಿಕದ (America) ಕೊಲೊರಾಡೋ ಸ್ಪ್ರಿಂಗ್ಸ್‌ನಿಂದ ಡಲ್ಲಾಸ್ ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ಬೆಂಕಿ (Fire Accident) ಕಾಣಿಸಿಕೊಂಡಿದೆ.
BREAKING: An American Airlines plane caught fire at Denver International Airport forcing passengers running.
Why does it seem like airline safety is plummeting under Trump? Maybe it’s because he’s making cuts to airline safety? pic.twitter.com/en9sK1hHuJ
— Ed Krassenstein (@EdKrassen) March 14, 2025
ಕೂಡಲೇ ವಿಮಾನವನ್ನು ಡೆನ್ವರ್ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಯಿತು. ಅಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಹೆಚ್ಚಾಗಿದೆ. ಅಲ್ಲದೇ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ನಿಲ್ದಾಣದ ಸಿಬ್ಬಂದಿ ವಿಮಾನದಲ್ಲಿದ್ದ 6 ಸಿಬ್ಬಂದಿ ಸೇರಿದಂತೆ, 178 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಅವಘಡದಲ್ಲಿ 12 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರನ್ನು ಸ್ಥಳಾಂತರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಪ್ರಯಾಣಿಕರು ವಿಮಾನದ ರೆಕ್ಕೆಯ ಮೇಲೆ ನಿಂತಿರುವುದನ್ನು ನೋಡಬಹುದಾಗಿದೆ.
ಪೈಲಟ್ ಹಾಗೂ ಏರ್‌ಪೋರ್ಟ್‌ನ ಸಿಬ್ಬಂದಿ ವಿಮಾನದಲ್ಲಿದ್ದ ಪ್ರತಿಯೊಬ್ಬರ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ತ್ವರಿತ ಮತ್ತು ನಿರ್ಣಾಯಕ ಕ್ರಮಕೈಗೊಂಡಿದ್ದಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಅಮೇರಿಕನ್ ಏರ್‌ಲೈನ್ಸ್ (American Airlines) ತಿಳಿಸಿದೆ.
ವಿಮಾನದಲ್ಲಿ ಅಗ್ನಿ ದುರಂತ ಸಂಭವಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಟ್ರಂಪ್ ನೇತೃತ್ವದಲ್ಲಿ ವಿಮಾನ ಸುರಕ್ಷತೆ ಕುಸಿಯುತ್ತಿರುವಂತೆ ತೋರುತ್ತಿದೆ, ಬಹುಶಃ ವಿಮಾನಯಾನ ಸುರಕ್ಷತಾ ಕ್ರಮಗಳನ್ನು ಕಡಿತಗೊಳಿಸಿರುವುದರಂದ ಇಂತಹ ಘಟನೆಗಳು ಸಂಭವಿಸುತ್ತಿರಬಹುದು ಎಂದು ಅಸಮಾಧಾನ ಹೊರಹಾಕಿದ್ದಾರೆ.