ಉಡುಪಿ| ನಟೋರಿಯಸ್ ರೌಡಿ ಇಸಾಕ್ ಕಾಲಿಗೆ ಗುಂಡೇಟು

Public TV
0 Min Read
isak police fire

ಉಡುಪಿ: ಗರುಡ ಗ್ಯಾಂಗ್‌ನ ನಟೋರಿಯಸ್ ರೌಡಿ ಇಸಾಕ್ ಕಾಲಿಗೆ ಗುಂಡೇಟು ಬಿದ್ದಿದೆ. ಹಿರಿಯಡ್ಕ ಸಮೀಪದ ಗುಡ್ಡೆ ಅಂಗಡಿ ಬಳಿ ಘಟನೆ.

ಆರೋಪಿಗಳನ್ನು ಹಾಸನದ ಚನ್ನರಾಯಪಟ್ಟಣದಿಂದ ಬಂಧಿಸಿ ಉಡುಪಿಗೆ ವಿಚಾರಣೆಗೆ ಕರೆದುಕೊಂಡು ಬರುವ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ಪ್ರಕರಣದಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದ್ದು, ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಶದಲ್ಲಿರುವ ಮೂವರು ಆರೋಪಿಗಳ ವಿಚಾರಣೆ ಮುಂದುವರಿದಿದೆ.

ಮೂತ್ರ, ವಾಂತಿ ಬರುತ್ತದೆ ಎಂದು ಹೇಳಿ ಪರಾರಿಯಾಗಲು ಯತ್ನಿಸಿದ್ದರು. ಮಣಿಪಾಲ, ಹಿರಿಯಡ್ಕ-ಮಲ್ಪೆ ಮೂವರು ಪೊಲೀಸ್ ಸಿಬ್ಬಂದಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Share This Article