ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲ್ಯಾನ್‌

Public TV
2 Min Read
amit shah

– ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸೀತಾ ಮಂದಿರ ನಿರ್ಮಾಣ ಘೋಷಿಸಿದ ಅಮಿತ್ ಶಾ

ಪಾಟ್ನಾ: ಅಯೋಧ್ಯೆ ಶ್ರೀರಾಮ ಮಂದಿರ ಮಾದರಿಯಲ್ಲೇ ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ (Sita Mata Mandir) ನಿರ್ಮಿಸುವುದಾಗಿ ಕೇಂದ್ರ ಸಚಿವ ಅಮಿತ್‌ ಶಾ (Amit Shah) ಘೋಷಸಿದ್ದಾರೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ (Bihar Elections) ಹಿನ್ನೆಲೆ ಅಮಿತ್‌ ಶಾ ಸೀತಾ ಮಂದಿರ ಘೋಷಿಸಿದ್ದು, ಬಿಜೆಪಿಯ ಈ ನಡೆಯನ್ನು ಜೆಡಿಯು ಮತ್ತು ಎಲ್‌ಜೆಪಿ ಸೇರಿದಂತೆ ಮಿತ್ರಪಕ್ಷಗಳು ಸ್ವಾಗತಿಸಿವೆ. ಇದನ್ನೂ ಓದಿ: ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್

ಗುಜರಾತ್‌ನಲ್ಲಿ ಶಾಶ್ವತ ಮಿಥಿಲಾ ಮಹೋತ್ಸವ 2025 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಬಿಹಾರ ಪ್ರದೇಶವು ಪ್ರಾಚೀನ ಕಾಲದಿಂದಲೂ ಪ್ರಜಾಪ್ರಭುತ್ವ ಮತ್ತು ತತ್ವಶಾಸ್ತ್ರವನ್ನು ಸಶಕ್ತಗೊಳಿಸುವ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

Nitish Kumar Bihar

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಹಾರಕ್ಕೆ ಹೋಗಿದ್ದಾಗ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದ್ದೆ. ಈಗ ಸೀತಾ ಮಾತೆಯ ಮಂದಿರ ನಿರ್ಮಾಣ ಮಾಡುವ ಕಾಲ ಬಂದಿದೆ. ಈ ದೇವಾಲಯ ಇಡೀ ಜಗತ್ತಿಗೆ ಸ್ತ್ರೀಶಕ್ತಿಯ ಸಂದೇಶವನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಮಕ್ಕಳಲ್ಲೂ ಕಾಡ್ತಿದೆ ಮಾರಕ ಕ್ಯಾನ್ಸರ್ – ಅಂಕಿ ಅಂಶ ಬಿಚ್ಚಿಟ್ಟ ಶರಣು ಪ್ರಕಾಶ್ ಪಾಟೀಲ್

ಗುಜರಾತ್‌ನಲ್ಲಿ ನೆಲೆಸಿರುವ ಮಿಥಿಲಾಂಚಲ್ ಬೆಳವಣಿಗೆಗೆ ಬಿಹಾರದ ಜನ ಗಣನೀಯ ಕೊಡುಗೆ ನೀಡಿದ್ದಾರೆ. ಮಿಥಿಲಾ ಭೂಮಿ ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಬುದ್ಧಿಜೀವಿಗಳ ಭೂಮಿಯಾಗಿದೆ. ಅದೇ ರೀತಿ ʻವಿದೇಹʼ ಪ್ರಾಚೀನ ಸಾಮ್ರಾಜ್ಯವು ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದರಲ್ಲದೇ ಭಾರತದ ಆರು ಪ್ರಮುಖ ಫಿಲಾಸಫಿಗಳಲ್ಲಿ 4 ಮಿಥಿಲಾಂಚಲ್‌ನಿಂದ ಬಂದಿವೆ ಎಂದು ಶಾ ಶ್ಲಾಘಿಸಿದ್ರು. ಇದನ್ನೂ ಓದಿ: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಹಿಂದೂ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿವಾದದ ಮಾತು

Share This Article