ಚಿಕ್ಕೋಡಿ: ಉತ್ತರ ಕರ್ನಾಟಕದಲ್ಲಿ ಬಿರುಬಿಸಿಲಿನ ಆರ್ಭಟ ಶುರುವಾಗಿದ್ದು ಚಿಕ್ಕೋಡಿ (Chikkodi) ಭಾಗದ ಜನರು ಬಿಸಿಲಿನ ಝಳಕ್ಕೆ ಹೈರಾಣಾಗಿದ್ದಾರೆ. ಕಳೆದ ಬಾರಿಗಿಂತಲೂ ಹೆಚ್ಚಿನ ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಲಿನ ಬೇಗೆಗೆ ಬೇಸತ್ತು ಹೋಗಿದ್ದಾರೆ.
ಬಿಸಿಲು ಜಿಲ್ಲೆಗಳಿಗಿಂತ ತಂಪಾಗಿರುತ್ತಿದ್ದ ಬೆಳಗಾವಿ (Belagavi) ಜಿಲ್ಲೆಯಲ್ಲಿ ಮಾರ್ಚ್ ಆರಂಭದಲ್ಲೇ ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಆರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದ 32 ಡಿಗ್ರಿ ಸೆಲ್ಸಿಯಸ್ ತಾಪಮಾನ, ಈ ಬಾರಿ 36 ರಿಂದ 38 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಒಟ್ಟಿಗೆ ಕಾಣಿಸಿಕೊಂಡು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಮಾಜಿ ಲವ್ ಬರ್ಡ್ಸ್
&
nbsp;2020ರಿಂದ ಇಲ್ಲಿಯವರೆಗೆ ಇದ್ದ ತಾಪಮಾನವನ್ನು ಈ ಬಾರಿ ಮಾರ್ಚ್ ಆರಂಭದಲ್ಲೇ ಹಿಂದಿಕ್ಕಿದೆ. ಮಾರ್ಚ್ ತಿಂಗಳ ಹಿಂದಿನ ವರ್ಷಗಳ ಗರಿಷ್ಠ ತಾಪಮಾನ ಹೋಲಿಕೆ ನೋಡುವುದಾದರೆ, 2020 ಮಾರ್ಚ್‌ನಲ್ಲಿ 32.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. 2021ರಲ್ಲಿ 30.7, 2022ರಲ್ಲಿ 32.5, 2023ರಲ್ಲಿ 33.8, 2024ನಲ್ಲಿ 34.5, 2025 ಮಾರ್ಚ್‌ನಲ್ಲಿ 37.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದನ್ನೂ ಓದಿ: `ಕೈ’ ಸಮಾವೇಶದಲ್ಲಿ ಮೃತಪಟ್ಟ ಕಾರ್ಯಕರ್ತನಿಗೆ 5 ಲಕ್ಷ ಪರಿಹಾರ ವಿತರಣೆ
ಚಿಕ್ಕೋಡಿಯಲ್ಲಿ ಅವಧಿಗೆ ಮುನ್ನವೇ ಬಿಸಿಲಿನ ಝಳಕ್ಕೆ ಜನರು ತುತ್ತಾಗುತ್ತಿದ್ದಾರೆ. ಜನರು ಮಕ್ಕಳೊಂದಿಗೆ ಮನೆಯಿಂದ ಹೊರ ಬರಲು ಯೋಚನೆ ಮಾಡುತ್ತಿದ್ದಾರೆ. ನಗರದಲ್ಲಿ ಬಿಸಿಲಿನ ದಾಹ ತಣಿಸಿಕೊಳ್ಳಲು ಕಲ್ಲಂಗಡಿ, ತಂಪು ಪಾನೀಯ ಅಂಗಡಿಗಳ ಮುಂದೆ ಜನ ಸೇರುತ್ತಿದ್ದಾರೆ. ಇದನ್ನೂ ಓದಿ: ಧನಕರ್‌ಜೀ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ – ಉಪರಾಷ್ಟ್ರಪತಿ ಆರೋಗ್ಯ ವಿಚಾರಿಸಿದ ಮೋದಿ
ಬಿಸಿಲ ಬೇಗೆಯು ಮೇ ತಿಂಗಳವರೆಗೆ ಭಯಾನಕವಾಗಿರಲಿದ್ದು, ಕಚೇರಿಗಳ ಸಮಯ ಬದಲಾವಣೆ ಮಾಡುವಂತೆ ಜನರು ವಿನಂತಿಸಿದ್ದಲ್ಲದೇ, ಪ್ರಾಣಿ ಪಕ್ಷಿಗಳ ಕುರಿತು ಕನಿಕರ ತೋರಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಿಂಗಾಯತರ ಸಮಾವೇಶ ಅಪ್ಪ ಮಕ್ಕಳ ಹಳೆಯ ಆಟ – ವಿಜಯೇಂದ್ರ ವಿರುದ್ಧ ಬಿ.ಪಿ ಹರೀಶ್ ವಾಗ್ದಾಳಿ