BMW ಕಾರಿನಿಂದ ಇಳಿದು ರಸ್ತೆಯಲ್ಲೇ ಮೂತ್ರ ವಿಸರ್ಜನೆ – ಬಳಿಕ ತಾನೇ ಪೊಲೀಸರಿಗೆ ಶರಣಾದ ಯುವಕ

Public TV
1 Min Read
pune traffic junction

ಮುಂಬೈ: ಪುಣೆಯ ಟ್ರಾಫಿಕ್ ಜಂಕ್ಷನ್‌ನಲ್ಲಿ (Pune Traffic Junction) ಯುವಕನೊಬ್ಬ ತನ್ನ ಬಿಎಂಡಬ್ಲ್ಯೂ ಕಾರಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಯುವಕ ವಿಡಿಯೋ ಮಾಡಿ ಕ್ಷಮೆಯಾಚಿಸಿದ್ದಾನೆ.

ಪುಣೆಯ ಯೆರವಾಡಾದ ಶಾಸ್ತ್ರಿನಗರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಯುವಕನನ್ನು ಗೌರವ್‌ ಅಹುಜಾ (Gaurav Ahuja) ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸಾರ್ವಜನಿಕರಿಂದ ಭಾರೀ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು (Pune Police) ಕಿಡಿಗೇಡಿಯ ಬೆನ್ನುಬಿದ್ದಿದ್ದರು. ಅಲ್ಲದೇ ಕೃತ್ಯ ಎಸಗಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ಕೃತ್ಯ ಎಸಗಿದ ವೇಳೆ ಆತ ಸಿಕ್ಕಾಪಟ್ಟೆ ಮದ್ಯ ಸೇವಿಸಿದ್ದ ಎಂದು ಶಂಕಿಸಿದ್ದರು.

Eknath Shinde

ಈ ಬೆನ್ನಲ್ಲೇ ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಗೌರವ್‌ ಅಹುಜಾ, ನಾನು ಮಾಡಿದ ಕೃತ್ಯ ನನಗೇ ನಾಚಿಕೆಯಾಗುತ್ತದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಕೇರಳಾಪುರದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂಪನ್ನ

ನಾನು ಗೌರವ್‌ ಅಹುಜಾ, ಪುಣೆಯ ನಿವಾಸಿ. ನಾನು ಮಾಡಿದ ಕೃತ್ಯದಿಂದ ನನಗೆ ತುಂಬಾ ನಾಚಿಕೆಯಾಗುತ್ತಿದೆ. ನಾನು ಪುಣೆ, ಮಹಾರಾಷ್ಟ್ರದ ಜನತೆ ಮಾತ್ರವಲ್ಲ ಇಡೀ ದೇಶದ ಎಲ್ಲಾ ಜನರಲ್ಲಿ ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ. ಪೊಲೀಸ್‌ ಇಲಾಖೆ, ಡಿಸಿಎಂ ಏಕನಾಥ್‌ ಶಿಂಧೆ ಅವರಿಗೂ ಕ್ಷಮೆಯಾಚಿಸುತ್ತೇನೆ. ಇದೊಂದು ಬಾರಿ ಕ್ಷಮಿಸಿ, ಮುಂದೆ ಇಂತಹ ತಪ್ಪು ಎಂದಿಗೂ ಮಾಡುವುದಿಲ್ಲ ಎಂದು ವೀಡಿಯೋನಲ್ಲಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ:  ‘ನಾನು ನಿನ್ನ ಪ್ರೀತಿಸುವೆ’ ಎಂದ ನಟಿ- ತನಿಷಾ ಪ್ರೀತಿಯಲ್ಲಿ ಬಿದ್ದಿರೋದು ಪಕ್ಕಾ ಎಂದ ಫ್ಯಾನ್ಸ್

ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: 3 ವಾರಗಳ ಹಿಂದೆ ಅಪ್ರಾಪ್ತ ಬಾಲಕಿ ನಾಪತ್ತೆ – 42 ವರ್ಷದ ವ್ಯಕ್ತಿಯ ಜೊತೆ ಶವವಾಗಿ ಪತ್ತೆ

Share This Article