ಪ್ರಜ್ವಲ್‌ ಇನ್ನೊಂದು ತಿಂಗಳಲ್ಲಿ ಹೊರಗೆ ಬರ್ತಾರೆ, ಯಾರು ತಲೆಕೆಡಿಸಿಕೊಳ್ಬೇಡಿ: ಸೂರಜ್‌ ರೇವಣ್ಣ

Public TV
1 Min Read
Prajwal Revanna Suraj Revanna

ಹಾಸನ: ಪ್ರಜ್ವಲ್‌ ರೇವಣ್ಣ ಇನ್ನೊಂದು ತಿಂಗಳಲ್ಲಿ ಹೊರಗೆ ಬರ್ತಾರೆ, ಯಾರು ತಲೆಕೆಡಿಸಿಕೊಳ್ಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ ಹೇಳಿದ್ದಾರೆ.

ಹೊಳೆನರಸೀಪುರದ ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ದನು ಸ್ಮರಣಾರ್ಥ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಪ್ರಜ್ವಲ್‌ ರೇವಣ್ಣ ಈ ಗ್ರಾಮಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರು ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ. ನಾವು, ನೀವು ಎಲ್ಲರೂ ಒಟ್ಟಿಗೆ ಸ್ವಾಗತ ಮಾಡೋಣ. ಇವತ್ತಿಗೆ ಪ್ರಪಂಚ ಮುಗಿದು ಹೋಗಿಲ್ಲ. ಮುಂದಕ್ಕೂ ರಾಜಕೀಯ ಏನು ಅನ್ನೋದು ನನಗೂ ಗೊತ್ತಿದೆ ಎಂದಿದ್ದಾರೆ.

ದಿನ ನಿತ್ಯ ನಾವು ನಿಮ್ಮ ಜೊತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತೇವೆ. ರೇವಣ್ಣ ಅವರು ಎಲ್ಲಾ ಹಳ್ಳಿಗಳಿಗೂ ರಸ್ತೆಗಳನ್ನು ಮಾಡಿದ್ರು. ಈಗಿನವರು ಎಲ್ಲಾ ಹಳ್ಳಿಗಳಲ್ಲೂ ದೇವಾಲಯ ನಿರ್ಮಾಣ ಮಾಡ್ತಿದ್ದಾರೆ. ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಎಂದು ಯೋಚನೆ ಮಾಡಬೇಕು. ಶಾಶ್ವತವಾಗಿ ನಿಮ್ಮ ಗ್ರಾಮದ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ ಎಂದು ಬೇಸರ ಹೊರಹಾಕಿದರು.

ಯುವಕರು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಒಂದು ಕಡೆ ಇರಬೇಕು. ಇನ್ನೊಂದು ನಾಲ್ಕೈದು ತಿಂಗಳಲ್ಲಿ ಸರ್ಕಾರ ಬದಲಾಗುತ್ತದೆ. ಆಗ ಕೆಲವರು ಬಂದು ಹೆಚ್.ಡಿ.ರೇವಣ್ಣಗೆ ಜೈ ಅಂತಾರೆ ಎಂದು ಸಂಸದ ಶ್ರೇಯಸ್‌ ಪಟೇಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

Share This Article