ಅಪರೂಪದಲ್ಲಿ ಅಪರೂಪದ ಸಾಧನೆ. ಅಂಗನವಾಡಿ ಮಕ್ಕಳಿಗಾಗಿ ಸಾಕಷ್ಟು ವಿರೋಧ ಕಟ್ಟಿಕೊಂಡು ತಾನೇ ಬಾವಿಯನ್ನು ತೋಡಿ, ನೀರು ಹರಿಸಿದ್ದಾರೆ ಕಾರವಾರದ ವಿಶಿಷ್ಟ ಸಾಧಕಿ ಗೌರಿ.
ಅತ್ಯಂತ ಕಡು ಬಡತನದ ಕುಟುಂಬದಿಂದ ಬಂದವರು ಗೌರಿ. ಅಂಗನವಾಡಿ ಮಕ್ಕಳು, ಊರವರು ಕುಡಿಯುವ ನೀರಿಗೆ ಪರದಾಟ ಪಡುವುದನ್ನು ನೋಡಲು ಆಗದೇ ತಾವೇ ಬಾವಿ ತೋಡುವ ನಿರ್ಧಾರ ಮಾಡಿದರು. ಕೆಲಸದವರಿಗೆ ಕೊಡಲು ದುಡ್ಡಿಲ್ಲದೇ ಇರುವುದರಿಂದ ತಾವೇ ಶ್ರಮ ಪಟ್ಟು ಬಾವಿ ತೋಡಿದರು. ಆದರೆ ಜಿಲ್ಲಾಡಳಿತ ವಿನಾಕಾರಣ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮಾಧ್ಯಮದ ಸಹಾಯದೊಂದಿಗೆ ಹೋರಾಟಕ್ಕಿಳಿದರು. ಪಬ್ಲಿಕ್ ಟಿವಿ ಕೂಡ ಗೌರಿಯ ಬೆನ್ನಿಗೆ ನಿಂತು ಬೆಂಬಲ ನೀಡಿತು. ಗೌರಿಯ ಹಠ ಛಲದ ಮುಂದೆ ದೊಡ್ಡವರ ದೊಡ್ಡಾಟ, ಪಾಲಿಟಿಕ್ಸ್ ನಡೆಯಲಿಲ್ಲ. ಕೊನೆಗೂ ಮಕ್ಕಳಿಗೆ ನೀರುಣಿಸಿದರು.
ಕುಂಭಮೇಳಕ್ಕೆ ಹೋಗಲು ಹಣವಿಲ್ಲದ ಗೌರಿ ಈಗ ಮತ್ತೆ ಮಹಾಕುಂಭಮೇಳದ ನೆನಪಿನಲ್ಲಿ 2 ತಿಂಗಳು ಶ್ರಮ ಪಟ್ಟು 40 ಅಡಿ ಬಾವಿ ತೋಡಿ ಮಗದೊಂದು ಸಾಧನೆ ಮಾಡಿದ್ದಾರೆ.
ಗೌರಿಗಾಗಿ ಗಂಗೆಯೂ ಉಕ್ಕಿ ಬಂದು ಊರಿನನವರ, ಅಂಗನವಾಡಿ ಮಕ್ಕಳ ದಾಹ ತೀರಿಸುತ್ತಿದ್ದಾಳೆ. ಈ ಅಪರೂಪದ ಸಾಧಕಿಗೆ ಪಬ್ಲಿಕ್ ಟಿವಿ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.