ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್‌ಗೆ (Radhika Pandit) ಇಂದು (ಮಾ.7) 41ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮ. ಈ ಹಿನ್ನೆಲೆ ಅಭಿಮಾನಿಗಳೊಂದಿಗೆ (Fans) ನಟಿ ಬರ್ತ್‌ಡೇ ಆಚರಿಸಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್
ಸದ್ಯ ಸಿನಿಮಾದಿಂದ ರಾಧಿಕಾ ಅಂತರ ಕಾಯ್ದುಕೊಂಡಿದ್ದರೂ ಕೂಡ ಅವರ ಮೇಲಿನ ಅಭಿಮಾನಿಗಳ ಕ್ರೇಜ್ ಕಮ್ಮಿಯಾಗಿಲ್ಲ ಎಂಬುದಕ್ಕೆ ಇದೇ ತಾಜಾ ಉದಾಹರಣೆ. ನೆಚ್ಚಿನ ನಟಿಗೆ ಶುಭಹಾರೈಸಲು ಬೆಂಗಳೂರಿನ ರಾಧಿಕಾ ನಿವಾಸದ ಬಳಿ ಇಂದು ಫ್ಯಾನ್ಸ್ ಜಮಾಯಿಸಿದ್ದರು.
- Advertisement
View this post on Instagram
- Advertisement
ಮನೆಯ ಬಳಿ ಬಂದ ಅಭಿಮಾನಿಗಳೊಂದಿಗೆ ನಟಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಫ್ಯಾನ್ಸ್ ಜೊತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ, ನೀಲಿ ಬಣ್ಣದ ಡೆನಿಮ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾಗೆ ವಿಶ್ ಮಾಡೋದರ ಜೊತೆ ಅವರ ಬ್ಯೂಟಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
View this post on Instagram
ಇನ್ನೂ ಪತಿ ಯಶ್ (Yash) ಸಿನಿಮಾ ಕೆರಿಯರ್‌ಗೆ ಸಾಥ್ ನೀಡುತ್ತಾ ಮಕ್ಕಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಕಮ್ ಬ್ಯಾಕ್‌ಗೆ ಫ್ಯಾನ್ಸ್ ಕಾಯ್ತಿದ್ದಾರೆ. ಅದ್ಯಾವಾಗ ಸಿನಿಮಾ ಕುರಿತು ಸಿಹಿಸುದ್ದಿ ಸಿಗಲಿದೆ ಎಂಬುದು ಕಾದುನೋಡಬೇಕಿದೆ.
ಇನ್ನೂ ರಾಧಿಕಾ ಕಡೆಯದಾಗಿ 2019ರಲ್ಲಿ ‘ಆದಿ ಲಕ್ಷ್ಮಿ ಪುರಾಣ’ (Aadi Lakshmi Purana) ಚಿತ್ರದಲ್ಲಿ ನಟಿಸಿದ್ದರು. ನಿರೂಪ್ ಭಂಡಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.