6.5 ಲಕ್ಷ ಕೊಡದೇ ವಂಚಿಸಿದ ಆರೋಪ- ನವನಿರ್ದೇಶಕಿ ವಿರುದ್ಧ ದೂರು

Public TV
1 Min Read
vismaya gowda 3

ವನಿರ್ದೇಶಕಿ ವಿಸ್ಮಯ ಗೌಡ (Vismaya Gowda) ವಿರುದ್ಧ 6.5 ಲಕ್ಷ ಹಣ ಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದನ್ನೂ ಓದಿ:‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ

vismaya gowda 1

6.5 ಲಕ್ಷ ಸಾಲ ಪಡೆದು ಹಣ ನೀಡದೇ ವಿಸ್ಮಯ ಗೌಡ ವಂಚಿಸಿದ್ದಾರೆಂದು ಎಂದು ಹಿಮಾನ್ವಿ ಬಿಂದು ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನೂ ಈ ಹಿಂದೆ `ಡಿಯರ್ ಕಣ್ಮಣಿ’ ಸಿನಿಮಾ ನಿರ್ದೇಶನ ಮಾಡೋದಾಗಿ ವಿಸ್ಮಯ ಹೇಳಿದ್ದರು. ಈ ಸಿನಿಮಾಗೆ ‘ಬಿಗ್ ಬಾಸ್’ ಖ್ಯಾತಿಯ ಕಿಶನ್ ಬಿಳಗಲಿ, ಭವ್ಯಾ ಗೌಡ ಇರೋದಾಗಿ ಹೇಳಿದ್ದರು. ಬಳಿಕ ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಹೊರಬಿದ್ದಿಲ್ಲ.

Share This Article