ಅಣ್ಣನಿಂದಲೇ 7 ತಿಂಗಳ ಗರ್ಭಿಣಿಯಾದ ತಂಗಿ‌

Public TV
1 Min Read
arrest crime

ಚಿಕ್ಕಮಗಳೂರು: ಸಂಬಂಧಗಳಿಗೆ ಬೆಲೆ ಕೊಡುವ ಭಾರತೀಯ ಸಂಸ್ಕೃತಿಯಲ್ಲಿ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತ ಘಟನೆಗೆ ಚಿಕ್ಕಮಗಳೂರು (Chikkamgaluru) ಜಿಲ್ಲೆಯ ಮಲೆನಾಡು ತಾಲೂಕಿನ ಕುಗ್ರಾಮವೊಂದು ಸಾಕ್ಷಿಯಾಗಿದೆ.

ಅಣ್ಣನೇ ತಂಗಿಯನ್ನ ಗರ್ಭಿಣಿ ಮಾಡಿದ್ದಾನೆ. ಮೊದಲ ವರ್ಷದ ಪಿಯುಸಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಆಕೆಯ ಅಣ್ಣನೇ (ದೊಡ್ಡಪ್ಪನ ಮಗ) 7 ತಿಂಗಳ ಗರ್ಭಿಣಿ (Pregnant) ಮಾಡಿದ್ದಾನೆ. ಈ ಕುರಿತು ಶೃಂಗೇರಿ ವಿಧಾನಸಭಾ ಕ್ಷೇತ್ರದ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.

 

ಸಂತ್ರಸ್ತೆಗೆ ಪೊಲೀಸರು ಸಾಕಷ್ಟು ಕೌನ್ಸಿಲಿಂಗ್ ಮಾಡಿದ್ದರು. ಮೂರು ದಿನ ಕೌನ್ಸಿಲಿಂಗ್ ಮಾಡಿದರೂ ಕೂಡ ಬಾಲಕಿ ಯಾರೆಂದು ಹೇಳಿರಲಿಲ್ಲ. ಆದರೆ ಮೂರು ದಿನದ ಬಳಿಕ ಬಾಲಕಿ ಪೊಲೀಸರ ಮುಂದೆ ನಿಜ ಹೇಳಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ಈಗ ಬಾಲಕಿಯ  ದೊಡ್ಡಪ್ಪನ ಮಗ 20 ವರ್ಷದ ಪ್ರಕಾಶ್ (ಹೆಸರು ಬದಲಿಸಲಾಗಿದೆ) ವಿರುದ್ಧ ಪ್ರಕರಣ ದಾಖಲಾಗಿದೆ.  ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 

Share This Article