ಯಾದಗಿರಿ: ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಸಿಎಂ ಆಗುವ ಯೋಗವಿದೆ ಎಂದು ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ (Nonavinakere Ajjayya) ಭವಿಷ್ಯ ನುಡಿದಿದ್ದಾರೆ.
ಅಬ್ಬೆತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಶ್ರೀಮಠದ ಆಶೀರ್ವಾದದಿಂದ ಡಿಕೆಶಿ ಸಿಎಂ ಆಗ್ತಾರೆ. ರೈತರ, ವರ್ತಕರ ಹಾಗೂ ಮಠದ ಭಕ್ತರ ಆಸೆ ಅವರು ಸಿಎಂ ಆಗಲಿ ಎಂಬುದೇ ಆಗಿದೆ. ಎಲ್ಲಾ ಜನರ ಸಂಕಲ್ಪದಿಂದ ಒಂದು ದಿನ ಸಿಎಂ ಆಗ್ತಾರೆ. ಯಾವ ದಿನ ಸಿಎಂ ಆಗ್ತಾರೆ ಎಂದು ಹೇಳೋಕೆ ಆಗಲ್ಲ ಎಂದಿದ್ದಾರೆ.
ಅಬ್ಬೆತುಮಕೂರು ವಿಶ್ವಾರಾಧ್ಯರ ಗದ್ದುಗೆಗೂ ಬಂದಿದ್ದೇನೆ. ಅವರ ಆಶೀರ್ವಾದವೂ ಡಿಕೆಶಿಗೆ ಸಿಗಲಿ. ಶ್ರೀ ಶೈಲ ಜಗದ್ಗುರುಗಳು ಬಂದಿದ್ದಾರೆ. ಆ ಪರಮಾತ್ಮನ ಆಶೀರ್ವಾದವೂ ಅವರಿಗೆ ಸಿಗಲಿ ಎಂದು ಸ್ವಾಮೀಜಿ ಪ್ರಾರ್ಥಿಸಿದ್ದಾರೆ.
ಶಿವಕುಮಾರ್ ಗಂಗಾ ಸ್ನಾನ ಮಾಡಿದ್ದಾರೆ. ಅವರ ಜೊತೆ ನಾವು ಪಾಲ್ಗೊಂಡಿದ್ದೆವು. ಆ ದೇವರ ಆಶೀರ್ವಾದ ಅವರಿಗೆ ಸಿಗಲಿ, ರಾಜ ಪ್ರತ್ಯಕ್ಷ್ಯ ದೇವರಾಗಲಿ ಎಂದು ಹಾರೈಸಿದ್ದಾರೆ.