ಬೀದರ್: ಏಕಾಏಕಿ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಮಿನಿ ಟಿಪ್ಪರ್ ಹೊತ್ತಿ ಉರಿದಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ ಪಟ್ಟಣದ ಚೆನ್ನಬಸವ ಆಶ್ರಮದ ಬಳಿ ನಡೆದಿದೆ.ಇದನ್ನೂ ಓದಿ: ಸಾಧುಕೋಕಿಲರಿಂದ ಸುದೀಪ್, ಯಶ್, ಧ್ರುವ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ: ಚಂದ್ರಚೂಡ್
Advertisement
ಬೀದರ್ ನಗರದ ಚಂದು ಎಂಬುವವರಿಗೆ ಸೇರಿದ ಮಿನಿ ಟಿಪ್ಪರ್ ಇದ್ದಾಗಿದ್ದು, ಕಿರಾಣಿ ಅಂಗಡಿಗಳಿಗೆ ಸಕ್ಕರೆ ಡೆಲಿವರಿ ಮಾಡುತ್ತಿದ್ದರು. ಇಂದು ರೇಡಿಯಂ ಅಂಗಡಿ ಬಳಿ ನಿಲ್ಲಿಸಿದ್ದಾಗ ಮಿನಿ ಟಿಪ್ಪರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ.
Advertisement
ಚಾಲಕ ಅಗ್ನಿ ಅವಘಡದಿಂದ ಪಾರಾಗಿದ್ದು, ಮಿನಿ ಟಿಪ್ಪರ್ ಬಹುತೇಕ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ಬೆಂಕಿಯನ್ನು ನಂದಿಸಿದ್ದಾರೆ. ಭಾಲ್ಕಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಕೋಳಿ ಅಂಕದ ಕೋಳಿ ರುಚಿ ಬಹಳ ಚೆನ್ನಾಗಿ ಇರುತ್ತೆ, ಬನ್ನಿ ರುಚಿ ತೋರಿಸ್ತೀವಿ: ಡಿಕೆಶಿಗೆ ಸುನೀಲ್ ಕುಮಾರ್ ಆಹ್ವಾನ
Advertisement
Advertisement