ಬೆಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ (Kankanady Police Station) ಎಫ್‌ಐಆರ್ ದಾಖಲಾಗಿರುವುದನ್ನು ಖಂಡಿಸಿ ವಿಧಾನಸಭೆಯಲ್ಲಿಂದು ಬಿಜೆಪಿ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅರವಿಂದ್ ಬೆಲ್ಲದ್ (Aravind Bellad), ಶಾಸಕರ ತಪ್ಪಿಲ್ಲದಿದ್ರೂ ಏಕಾಏಕಿ ಎಫ್‌ಐಆರ್ ಹಾಕಲಾಗಿದೆ. ಸಾಕ್ಷಿ ಇಲ್ಲದೇ ಕಾಂಗ್ರೆಸ್ ಕಾರ್ಯಕರ್ತ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್ ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ತಿಳಿಸಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲುಣಿಸಲು ಸೂಕ್ತ ಸೌಕರ್ಯ ಕಲ್ಪಿಸಿ – ಸರ್ಕಾರಗಳಿಗೆ ಸುಪ್ರೀಂ ಸೂಚನೆ
Advertisement
Advertisement
ಶಾಸಕ ಸುನೀಲ್ ಕುಮಾರ್ ಮಾತನಾಡಿ, ದಿಢೀರ್ ಎಫ್‌ಐಆರ್ ಹಾಕಿದರೆ ಶಾಸಕರು ಹೇಗೆ ಕೆಲಸ ಮಾಡೋದು ಅಂತ ಆಕ್ರೋಶ ಹೊರಹಾಕಿದರು. ಇದು ಗೂಂಡಾ ರಾಜ್ಯ. ಸಾಕ್ಷಿ ಇಲ್ಲದೇ ಎಫ್‌ಐಆರ್ ಹಾಕಿದ್ದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು. ಇದನ್ನೂ ಓದಿ: ಹಾವೇರಿ| ಕೆರೆಗೆ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
Advertisement
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ನಾನು ಯಾರ ಹಲ್ಲೆಗೂ ಕುಮ್ಮಕ್ಕು ಕೊಟ್ಟಿಲ್ಲ. ನಾನೂ ಹಲ್ಲೆ ಮಾಡಿಲ್ಲ. ಇದಕ್ಕೇನಾದರೂ ವಿಡಿಯೋ, ಸಿಸಿಟಿವಿ ಸಾಕ್ಷಿ ಇದೆಯಾ? ನಾನು ಕೈ ಮಾಡಿರೋದು ಸಾಬೀತಾರೆ ಸದನ ಬಿಟ್ಟು ಹೋಗುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಆಯ್ಕೆ ಪ್ರಶ್ನಿಸಿ ಅರ್ಜಿ – ಮಾ.25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ
Advertisement
ಬಳಿಕ ಮಾತಾಡಿದ ಗೃಹ ಸಚಿವ ಜಿ.ಪರಮೇಶ್ವರ್, ನಾಳೆ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಉತ್ತರ ಕೊಡುತ್ತೇನೆ. ಸುಮ್ಮನೇ ಎಫ್‌ಐಆರ್ ಹಾಕಲ್ಲ. ಕಾರಣ ಇಲ್ಲದೇ ಎಫ್‌ಐಆರ್ ಹಾಕಿದರೆ ಅದು ಪೊಲೀಸರ ತಪ್ಪು ಎಂದರು. ಇದನ್ನೂ ಓದಿ: ಸ್ವ ಇಚ್ಛೆಯಿಂದ ಗ್ಯಾರಂಟಿ ಬಿಟ್ಟುಕೊಡುವ ಜನರಿಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ: ಹೆಚ್.ಎಂ.ರೇವಣ್ಣ