ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದ ಶಾಸಕ – ಸ್ವಚ್ಛಗೊಳಿಸಿದ ಸ್ಪೀಕರ್‌

Public TV
2 Min Read
UP Speaker

– ಉಗುಳಿದ ಶಾಸಕರನ್ನ ವಿಡಿಯೋನಲ್ಲಿ ನೋಡಿದ್ದೇನೆ, ತಪ್ಪೊಪ್ಪಿಕೊಳ್ಳಿ ಅಂತ ವಾರ್ನಿಂಗ್‌

ಲಕ್ನೋ: ಉತ್ತರ ಪ್ರದೇಶದ ವಿಧಾನಸಭೆಯಲ್ಲಿಂದು (Uttar Pradesh Assembly) ವಿಚಿತ್ರ ಪ್ರಸಂಗವೊಂದು ನಡೆದಿದೆ. ಸ್ಪೀಕರ್‌ ಸತೀಶ್‌ ಮಹಾನಾ ಅವರು, ಕೆಲ ಸದಸ್ಯರು ಪಾನ್‌ ಮಸಾಲ ಸೇವಿಸಿದ ಬಳಿಕ ವಿಧಾನಸಭೆಯ ಸಭಾಂಗಣದಲ್ಲೇ ಉಗುಳಿರುವ (Spitting Pan Masala) ವಿಚಾರವನ್ನು ಪ್ರಸ್ತಾಪಿಸಿದರು. ಅಲ್ಲದೇ ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿಯೂ ಹೇಳಿದರು.

ಕಲಾಪ ಆರಂಭಕ್ಕೂ ಮುನ್ನವೇ ಮಾತನಾಡಿದ ಸ್ಪೀಕರ್‌, ಇಂದು ಬೆಳಗ್ಗೆ ಮಾನ್ಯ ಸದಸ್ಯರೊಬ್ಬರು ನಮ್ಮ ವಿಧಾನಸೌಧದ ಈ ಸಭಾಂಗಣದಲ್ಲಿ ಪಾನ್‌ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ಬಂತು. ಹಾಗಾಗಿ ನಾನಿಲ್ಲಿಗೆ ಬಂದು ಅದನ್ನು ಸ್ವಚ್ಛಗೊಳಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ʻಕೈʼ ಕಾರ್ಯಕರ್ತೆ ಹಿಮಾನಿ ಹತ್ಯೆ ಕೇಸ್‌ – ಮೃತದೇಹ ಸೂಟ್‌ಕೇಸ್‌ನಲ್ಲಿ ಹಾಕಿ ಆರೋಪಿ ಎಳೆದೊಯ್ಯುವ ಸಿಸಿಟಿವಿ ದೃಶ್ಯ ಪತ್ತೆ

ಮುಂದುವರಿದು.. ನಾನು ಉಗುಳಿದ ಶಾಸಕರನ್ನು ವಿಡಿಯೋನಲ್ಲಿ ನೋಡಿದ್ದೇನೆ. ಆದ್ರೆ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ, ಹಾಗಾಗಿ ನಾನು ಅವರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಅಂತ ನಾನು ಎಲ್ಲಾ ಸದರಿಗೆ ಇತ್ತಾಯಿಸುತ್ತೇನೆ. ಈ ಸಭೆಯಲ್ಲಿ ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿ ಪ್ರಶ್ನೆಯಲ್ಲಿರುವ ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದ್ರೆ ಒಳ್ಳೆಯದು, ಇಲ್ಲದಿದ್ದರೆ ನಾನೇ ಅವರನ್ನು ಕರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: PUBLiC TV Impact | ಸಿಎಂ ಮನೆ ಬಳಿಯಿದ್ದ ವ್ಯಾಪಾರ ರಹಿತ ವಲಯ ಬೋರ್ಡ್ ತೆಗೆದ ಪಾಲಿಕೆ

UP Speaker 2

ಕಳೆದ ಫೆ.20 ರಂದು ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು 2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್‌ ರಾಜ್ಯದ ಬಜೆಟ್ 2024-25ರ ಬಜೆಟ್‌ಗಿಂತ ಶೇ. 9.8 ರಷ್ಟು ಹೆಚ್ಚಾಗಿದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: ವಿಜಯಪುರ ಕಾನ್ಸ್‌ಟೇಬಲ್‌ ಭಾವುಕ ಪೋಸ್ಟ್‌ – ಆತನಿಂದ ರಜೆಗೆ ಯಾವ್ದೇ ಮನವಿ ಬಂದಿಲ್ಲ: ಎಸ್ಪಿ ಸ್ಪಷ್ಟನೆ

Share This Article