ರಕ್ತದಲ್ಲಿ ಬರೆದು ಕೊಡ್ತೀನಿ, ಡಿಸೆಂಬರ್ ಒಳಗೆ ಡಿಕೆಶಿ ಸಿಎಂ ಆಗ್ತಾರೆ: ಶಿವಗಂಗಾ ಬಸವರಾಜ್

Public TV
1 Min Read
DK Shivakumar Basavaraj Shivaganga

ದಾವಣಗೆರೆ: ರಕ್ತದಲ್ಲಿ ಬೇಕಾದರೆ ಬರೆದು ಕೊಡ್ತೀನಿ, ಡಿಸೆಂಬರ್ ಒಳಗೆ ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗುತ್ತಾರೆ, ಅದರಲ್ಲೂ ಡಿಸೆಂಬರ್ ನೊಳಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಚನ್ನಗಿರಿ ಕ್ಷೇತ್ರದ ಕೈ ಶಾಸಕ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯ (Davanagere) ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ ಡಿಕೆ ಶಿವಕುಮಾರ್ ಸಾಹೆಬ್ರು ಸಾಕಷ್ಟು ದುಡಿದಿದ್ದಾರೆ. 80 ಶಾಸಕರು ಗೆಲ್ಲಲು ಡಿಕೆ ಶಿವಕುಮಾರ್ ಅವರ ಪಾತ್ರ ಇದೆ. ಅಲ್ಲದೇ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ 9 ಸ್ಥಾನ ಗೆಲ್ಲಲು ಅವರ ಪಾತ್ರ ಹೆಚ್ಚಿದೆ. ಆದ್ದರಿಂದ ಅವರು ಸಿಎಂ ಆಗೇ ಆಗುತ್ತಾರೆ. ಮುಂದೆ ಅವರು ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಈ ಡಿಸೆಂಬರ್‌ನಿಂದ ಮುಂದಿನ 5 ವರ್ಷ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅಂದರೆ ಏಳೂವರೆ ವರ್ಷ ಅವರೇ ಸಿಎಂ ಆಗಿರುತ್ತಾರೆ ಎಂದರು. ಇದನ್ನೂ ಓದಿ: America| ಬೊಲಿವಿಯಾದಲ್ಲಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ – 37 ಮಂದಿ ಸಾವು, 39 ಜನರಿಗೆ ಗಾಯ

ಇನ್ನು ಸಚಿವ ಕೆಎನ್ ರಾಜಣ್ಣ ವಿರುದ್ಧ ಕಿಡಿಕಾರಿದ ಅವರು, ರಾಜಣ್ಣನವರ ಹೇಳಿಕೆಯಿಂದ ಪಕ್ಷಕ್ಕೆ, ಸರ್ಕಾರಕ್ಕೆ ಭಾರೀ ಮುಜುಗರ ಆಗುತ್ತಿದೆ. ಹೈಕಮಾಂಡ್ ಇದನ್ನು ಗಮನಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ರಾಜಣ್ಣ ಮೇಲೆ ಕ್ರಮ ಕೈಗೊಂಡರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಉತ್ತರಾಖಂಡ ಹಿಮಕುಸಿತ – ಮೃತರ ಸಂಖ್ಯೆ 5ಕ್ಕೆ ಏರಿಕೆ; ರಕ್ಷಣಾ ಕಾರ್ಯಕ್ಕೆ ರೆಕೊ ರಾಡಾರ್‌ಗಳು, ಡ್ರೋನ್‌ ಬಳಕೆ

Share This Article