ದುಬೈ: ಲೀಗ್ ಸುತ್ತಿನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಸೆಮಿಫೈನಲ್ಸ್‌ಗೆ ಪ್ರವೇಶ ಪಡೆದಿರುವ ಭಾರತ ಮತ್ತು ನ್ಯೂಜಿಲೆಂಡ್ (New Zealand) ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಇಂದಿನ ಪಂದ್ಯದಲ್ಲಿ ಭಾರತ (Team India) ಗೆದ್ದರೆ, ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ, ಸೋತರೆ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟಕ್ಕಿಳಿಯಲಿದೆ.
ಎ-ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ – ಕಿವೀಸ್ ಈಗಾಗಲೇ ಸೆಮೀಸ್ ಪ್ರವೇಶಿಸಿರುವುದರಿಂದ ಈ ಪಂದ್ಯದ ಫಲಿತಾಂಶ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೂ ಅಜೇಯವಾಗಿ ಸೆಮೀಸ್ ಪ್ರವೇಶಿಸುವ ಅವಕಾಶವನ್ನು ಪಂದ್ಯ ದಯಪಾಲಿಸಿದೆ. ಇದನ್ನೂ ಓದಿ: ಇಂದು ಭಾರತ Vs ಕಿವೀಸ್ ಹೈವೋಲ್ಟೇಜ್ ಕದನ – ಸ್ಪಿನ್ನರ್‌ಗಳ ಚಕ್ರವ್ಯೂಹ ಭೇದಿಸುವುದೇ ಟೀಂ ಇಂಡಿಯಾ?
ತಲಾ 4 ಅಂಕ ಗಳಿಸಿದ್ದರೂ ರನ್‌ರೇಟ್ ಆಧಾರದಲ್ಲಿ ಕಿವೀಸ್ ಎ-ಗುಂಪಿನ ಅಗ್ರಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಭಾರತ ಗೆದ್ದರೇ ತನ್ನ ಗುಂಪಿನಿಂದ ಅಗ್ರಸ್ಥಾನಿಯಾಗಿ ಹೊಮ್ಮಲಿದೆ. ಇದನ್ನೂ ಓದಿ: Champions Trophy: ಸೋತ ಇಂಗ್ಲೆಂಡ್ ಟೂರ್ನಿಯಿಂದ ಔಟ್ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ
ಭಾರತ ಗೆದ್ದರೆ ಸೆಮಿಸ್‌ನಲ್ಲಿ ಆಸೀಸ್ ಎದುರಾಳಿ:
ಇತ್ತ ಬಿ-ಗುಂಪಿನಲ್ಲಿ 5 ಅಂಕ ಪಡೆದಿರುವ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಅಂಕಪಟ್ಟಿಯ ಪ್ರಕಾರ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಹಾಗೂ ಬಿ ಗುಂಪಿಯಲ್ಲಿ 2ನೇ ಸ್ಥಾನ ಪಡೆದ ಪಂದ್ಯಕ್ಕೆ ಹಾಗೂ ಎ-ಗುಂಪಿಯನ 2ನೇ ಸ್ಥಾನ ಪಡೆದ ತಂಡಕ್ಕೆ ಮತ್ತು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಹೀಗಾಗಿ ಭಾರತ ಇಂದಿನ ಪಂದ್ಯದಲ್ಲಿ ಬಲಿಷ್ಠ ಆಸೀಸ್ ತಂಡವನ್ನು ಎದುರಿಸಲೀದೆ.
ಮರುಕಳಿಸುವುದೇ 2023ರ ವಿಶ್ವಕಪ್ ನೆನಪು:
2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿ ಫೈನಲ್‌ನಲ್ಲಿ ಭಾರತ, ಆಸೀಸ್ ತಂಡಗಳು ಮುಖಾಮುಖಿಯಾಗಿದ್ದವು. ಅಂದು ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದು ಭಾರತ ಆಸೀಸ್ ಬಿಗಿ ಬೌಲಿಂಗ್ ಹಿಡಿತಕ್ಕೆ ತತ್ತರಿಸಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ಆದ್ರೆ ಟ್ರಾವಿಸ್ ಹೆಡ್ ಅವರ ಶತಕದಾಟದಿಂದಾಗಿ ಭಾರತಕ್ಕೆ ಸೋಲಾಯಿತು. ಇದು ಇಡೀ ಭಾರತೀಯರಿಗೆ ನೋವುಂಟುಮಾಡಿತ್ತು. ಇದೀಗ ಈ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತಕ್ಕೆ ಅವಕಾಶ ಸಿಗುವುದೇ ಅನ್ನೋದನ್ನ ಕಾದುನೋಡಬೇಕಿದೆ.