ಬೆಂಗಳೂರು: ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals Women) ಮುಂಬೈ (Mumbai Indians Women) ವಿರುದ್ಧ ಭರ್ಜರಿ 9 ರನ್‌ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು.
Delhi Capitals go ???? of the #TATAWPL 2025 points table with 8️⃣ points#DC complete the league phase double over #MI this season ????
Scorecard ▶️ https://t.co/wVyWwYwJ0S#DCvMI | @DelhiCapitals pic.twitter.com/jFoBss6mUQ
— Women’s Premier League (WPL) (@wplt20) February 28, 2025
ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (Shafali Verma) ಮತ್ತು ನಾಯಕಿ ಮೆಗ್ ಲ್ಯಾನಿಂಗ್ (Meg Lanning) ಮೊದಲ ವಿಕೆಟಿಗೆ 85 ರನ್ ಜೊತೆಯಾಟವಾಡುವಾಗಲೇ ಡೆಲ್ಲಿ ಜಯಗಳಿಸುವುದು ಖಚಿತವಾಗಿತ್ತು.
ಶಫಾಲಿ ವರ್ಮಾ 43 ರನ್ (28 ಎಸೆತ, 4 ಬೌಂಡರಿ, 3 ಸಿಕ್ಸ್) ಹೊಡೆದರೆ ಮೆಗ್ ಲ್ಯಾನಿಂಗ್ ಔಟಾಗದೇ 60 ರನ್ (49 ಎಸೆತ, 9 ಬೌಂಡರಿ) ಸಿಡಿಸಿದರು. ಜೆಮಿಮಾ ರೋಡ್ರಿಗಸ್ ಔಟಾಗದೇ 15 ರನ್ ಹೊಡೆದರು.
HAMMERED ❌ 2️⃣ ????
Shafali Verma dealt in sixes in her fiery cameo of 43 (28)????#DC are flying along at 89/1 after 10 overs.
Updates ▶️ https://t.co/wVyWwYwJ0S #TATAWPL | #DCvMI | @DelhiCapitals | @TheShafaliVerma pic.twitter.com/M0CeaGO2g8
— Women’s Premier League (WPL) (@wplt20) February 28, 2025
ಮುಂಬೈ ಇಂಡಿಯನ್ಸ್ 35 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡರೂ 73 ರನ್ ಆದಾಗ ನಾಯಕಿ ಹರ್ಮನ್ ಪೀತ್ ಕೌರ್ ಔಟಾದ ಬೆನ್ನಲ್ಲೇ ಪತನ ಆರಂಭವಾಯಿತು. 50 ರನ್ ಅಂತರದಲ್ಲಿ 7 ವಿಕೆಟ್ ಪತನಗೊಂಡ ಪರಿಣಾಮ ಮುಂಬೈ ಕೇವಲ 123 ರನ್ ಗಳಿಸಿತು.